ವಿರಾಜಪೇಟೆ:ಗೌರಮ್ಮ ಪಲ್ಲಕಿ ಉತ್ಸವ ಆಚರಣೆ
ವಿರಾಜಪೇ: ಇತಿಹಾಸ ಪ್ರಸಿದ್ದ ವಿರಾಜಪೇಟೆಯ ಐತಿಹಾಸಿಕ ಜೈನರ ಬೀದಿಯ ಬಸವನಗುಡಿ ಪ್ರದೇಶ ಗೌರಮ್ಮನ ನಗರ ಸಂಚಾರದ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ನಗರದಲ್ಲಿ ನಡೆಯುವ ಗೌರಿ-ಗಣೇಶೋತ್ಸವಕ್ಕೆ ಗೌರಮ್ಮನ ನಗರ ಪ್ರದಕ್ಷಿಣೆಯ ಚಾಲನೆಯು ಮುನ್ನುಡಿಯಾಗಿದೆ. ಗಣೇಶ ಚತುರ್ಥಿಯ ಹಿಂದಿನ ದಿನ ಗೌರಮ್ಮ ಆಗಮನವಾಗುತ್ತದೆ.
ಶುಭ ಮಂಗಳಕಾರವಾದ ಸುಧಿನದಿ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಲ್ಲಿ ದೇಗುಲದ ಪ್ರಧಾನ ಆರ್ಚಕರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಕೆರೆಗೆ ಅರ್ಪಿತವಾದ ವಸ್ತುಗಳನ್ನು ಆರ್ಚಕರು ಮುಳಕು ಹಾಕಿ ಹೊರ ಬರುವ ಸಂದರ್ಭದಲ್ಲಿ ಕೈಗೆ ದೊರಕುವಸ್ತುವಿನಿಂದ ನಿಗದಿತ ಸನ್ನೆ ಘೋಚರವಾಗುತ್ತದೆ ಎಂಬುದು ಐತಿಹ್ಯ ಕರೆಯಿಂದ ಹೊರಬಂದ ವಸ್ತು ಬಳೆಯಂದಾಯಿತು. ಬಳೆಯು ಸುಮಂಗಲಿಯರ ಸಂಕೇತವಾಗಿದೆ ಎಂದು ಪ್ರಧಾನ ಆರ್ಚಕರು ಘೋಷಣೆ ಮಾಡಿದರು. ನಂತರದಲ್ಲಿ ತೆಲುಗರ ಬೀದಿ, ದಖ್ಖನಿಮೊಹಲ್ಲ, ಮೊಗರಗಲ್ಲಿ (ಕಾವೇರಿ ಕಲ್ಯಾಣ ಮಂಟಪ ಮುಂಭಾಗ) ಜೈನರಬೀದಿ, ದೇವಾಂಗಬೀದಿ, ಮುಖ್ಯ ರಸ್ತೆ, ಗಾಂಧೀನಗರ, ಗೌರಿಕೆರೆ, ಕಾಂಚಿಕಾಮಕ್ಷೀ ರಸ್ತೆ ಮುಂದುವರೆದು ಸಂಜೆಯ ವೇಳೆಗೆ ಪಲ್ಲಕ್ಕಿ ಶೋಭಾಯತ್ರೆಯು ಕೊನೆಗೊಂಡಿತು.
ಪ್ರದೇಶ ಗೌರಮ್ಮ ಹೊರಡುವ ಮಾರ್ಗದಲ್ಲಿ ಹೆಂಗಳೇಯರಿಂದ ಭಾಗಿನ ಅರ್ಪಣೆ, ಇಡುಕಾಯಿ ಸೇವೆ, ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು. ಪಲ್ಲಕ್ಕಿ ಮೆರವಣಿಗೆ ಶುಭ ಮಂಗಳಕರ ವಾದ್ಯವಾದ ಪಂಚವಾದ್ಯವು ಮೆರಗು ನೀಡಿತು. ದೇಗುಲದ ಪ್ರಧಾನ ಅರ್ಚಕರು, ದೇಗುಲದ ಆಡಳಿತ ಸಮಿತಿಯ ಸದಸ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಡಿದ್ದರು. ನಗರದ ವಾಸಿಗಳಿಗೆ ಪ್ರದೇಶ ಗೌರಮ್ಮನು ಸಕಲ ಸನ್ಮಂಗಳ ಕರುಣಿಸಿ ಅಭಯಹಸ್ತ ನೀಡಿ ಹಾರೈಸಿದಳು.
ವರದಿ:ಕಿಶೋರ್ ಕುಮಾರ್ ಶೆಟ್ಟಿ