ವಿರಾಜಪೇಟೆ:ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮಹಾಸಭೆ: ಅಧ್ಯಕ್ಷರಾಗಿ ಶಿವು ಪುನರಾಯ್ಕೆ
ವಿರಾಜಪೇಟೆ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈ ಭಾರತ್ ಆಟೋಚಾಲಕರು ಹಾಗೂ ಮಾಲೀಕರ ಸಂಘ (ರಿ) ವಿರಾಜಪೇಟೆ ಕೊಡಗು 2025-26 ನೇ ಸಾಲಿನ ಮಾಹಸಭೆಯು ನಡೆದು ಸಂಘದ ಅದ್ಯಕ್ಷರಾಗಿ ಶಿವು, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಜೀವನ್ ಪುನರ್ ಆಯ್ಕೆಗೊಂಡಿದ್ದಾರೆ.
ಜೈ ಭಾರತ್‌ಆಟೋಚಾಲಕರು ಹಾಗೂ ಮಾಲೀಕರ ಸಂಘ (ರಿ) ವಿರಾಜಪೇಟೆಯ 2025-26 ನೇ ಸಾಲಿನ ಸಂಘದ ಮಹಾ ಸಭೆಯು ನಗರದ ಕಿತ್ತೂರು ರಾಣಿ ಚೆನ್ನಮ್ಮರಸ್ತೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ಸಂಘದ ಅದ್ಯಕ್ಷರಾದ ಬೀಕಚಂಡ ಪುಟ್ಟು ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಟ್ಟು ಬೆಳ್ಯಪ್ಪ ಅವರು, ಸಂಘವು ಚಾಲಕರ ಮತ್ತು ಮಾಲೀಕರ ಹಿತವನ್ನುಕಾಪಾಡಿಕೊಂಡು, ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಜಿಲ್ಲಾ ಪರವಾನಿಗೆಗಾಗಿ ಸಂಘವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.ಶಾಸಕರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರವನ್ನು ಮಾಡಿದೆ.ಸಂಘದ ಬಲವರ್ಧನೆಗಾಗಿ ಸರ್ವ ಸದಸ್ಯರು ಒಂದಾಗಿ ಪ್ರಯತ್ನಪಡಬೇಕು.ಸಂಘದಲ್ಲಿ ಪ್ರಸ್ತುತ ಇಬ್ಬರು ಮಹಿಳಾ ಸದಸ್ಯರು ಸೇರಿ ಒಟ್ಟು 81 ಸದಸ್ಯರಿದ್ದಾರೆ.ಮಹಾ ಸಭೆಯಲ್ಲಿ ಸುಮಾರು 10 ಮಂದಿ ನೂತನ ಸದಸ್ಯರು ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸಹಕಾರ ನೀಡಿದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಬಳಿಕ ಜೈ ಭಾರತ್ ಆಟೋಚಾಲಕರು ಹಾಗೂ ಮಾಲೀಕರ ಸಂಘ (ರಿ) ವಿರಾಜಪೇಟೆ ಕೊಡಗು ಸಂಘದ 2025-26 ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ನಿರ್ದೇಶಕರಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಶಿವದಾಸ್ (ಶಿವು) ಉಪಾಧ್ಯಕ್ಷರಾಗಿ ಹ್ಯಾರಿಸ್, ಮತ್ತು ಜಗದೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜೀವನ್, ಸಹ ಕಾರ್ಯದರ್ಶಿಯಾಗಿ ಕೋಮಲ ಪ್ರಿಯ ಸಂಘಟನಾ, ಕಾರ್ಯದರ್ಶಿಯಾಗಿ ಜಗತ್ ಕುಮಾರ್, ಟಿ.ಕೆ.ಕೋಶಾಧಿಕಾರಿಯಾಗಿ ಬೀಕಚಂಡ ಪುಟ್ಟು ಬೆಳ್ಯಪ್ಪ, ಸಂಘದ ಗೌ.ಅಧ್ಯಕ್ಷರಾಗಿ ಪ್ರಭು ಕುಟ್ಟಪ್ಪ ಹಾಗೂ ಉದ್ಯಮಿ ಎ. ವಿನೂಪ್, ಸಂಘದ ಕಾನೂನು ಸಲಹೆಗಾರರಾಗಿ ವಕೀಲರಾದ ಬಿ.ಎಸ್. ಪುಷ್ಪರಾಜ್, ಗೌ.ಸಲಹೆಗಾರರಾಗಿ ಪ್ರವೀಣ್ ಶೇಟ್, ನಿರ್ದೇಶಕರಾಗಿ ಜನಾರ್ಧನ್, ಶುಭಕರ್, ಜಿನ್ನಪ್ಪ, ಆಶೋಕ್, ಯಶ್ವಿನಿ, ಜೇಕಬ್ ನರೋನ, ರೇಗನ್, ಪ್ರಶಾಂತ್, ಮತ್ತುಅರ್ಜುನ್‌ತಿಮ್ಮಯ್ಯ ಅವರುಗಳು ಆಯ್ಕೆಗೊಂಡರು. ಸಂಘದ ಕಾರ್ಯದರ್ಶಿಗಳಾದ ಕೆ.ಜೀವನ್ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.ಜೈ ಭಾರತ್ ಆಟೋಚಾಲಕರು ಹಾಗೂ ಮಾಲೀಕರ ಸಂಘ (ರಿ) ವಿರಾಜಪೇಟೆಕೊಡಗು ಪದಾಧಿಕಾರಿಗಳು, ಸರ್ವ ಸದಸ್ಯರು ಮಾಹಸಭೆಯಲ್ಲಿ ಹಾಜರಿದ್ದರು.
ವರದಿ: ಕಿಶೋರ್‌ಕುಮಾರ್ ಶೆಟ್ಟಿ