ವಿರಾಜಪೇಟೆ: ಶ್ರದ್ಧಾ ಭಕ್ತಿಯಿಂದ ಜರುಗಿದ ಬೃಂದಾವನ ಶ್ರೀ ರಾಯರ ಜಯಂತಿ
ವಿರಾಜಪೇಟೆ: ಬೃಂದಾವನದ ಶ್ರೀ ಗುರು ರಾಯ ರಾಘವೇಂದ್ರ ಸ್ವಾಮಿಗಳ ದಿವ್ಯ ಆರಾಧನೆ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ವಿರಾಜಪೇಟೆ ನಗರದ ಚಿಕ್ಕಪೇಟೆ ಛತ್ರಕೆರೆ ಸಮೀಪದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354 ನೇ ದಿವ್ಯ ಆರಾಧನೆಯು ಭಕ್ತಿ ಪೂರ್ವಕವಾಗಿ ನಡೆಯಿತು. ದೇಗುಲದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಭಟ್ ಅವರ ಸಾನಿಧ್ಯದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಆರಾಧನೆಯಂದು ಮುಂಜಾನೆ ಸ್ವಾಮಿಗಳ ದಿವ್ಯ ಮೂರ್ತಿಗೆ ಕ್ಷೀರಾಭಿಶೇಕ, ವಿವಿಧ ಅಭಿಶೇಕಗಳು ನಡೆದವು. ನಂತರ ವಿವಿದ ಹೂವುಗಳಿಂದ ಅಲಂಕಾರ ಪೂಜಾ ನಡೆಯಿತು. ನಗರದ ಮಹಿಳಾ ಸಂಘದ ಭಕ್ತರಿಂದ ಗುರುರಾಯರ ಭಜನೆ ನಾಮಾವಳಿಗಳ ಸಂಕೀರ್ತನೆ ಜರುಗಿತು. ಬಳಿಕ ಮದ್ಯಾಹ್ನ ಶ್ರೀ ಸ್ವಾಮಿಗೆ ಮಾಹಾ ಮಂಗಳಾರತಿ ಮತ್ತು ಮಹಾಪೂಜೆ ಸಲ್ಲಿಕೆಯಾದವು.ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ನಗರದ ವಿವಿಧ ಸ್ಥಳಗಳಿಂದ ಆಗಮಿಸಿದ ಭಕ್ತರು ಹಾಜರಿದ್ದು ಶ್ರೀ ಸ್ವಾಮಿಯ ದರ್ಶನ ಪಡೆದು ಪುನಿತರಾದರು.