ವಿರಾಜಪೇಟೆ: ಅನಾರೋಗ್ಯ ಪೀಡಿತನಾಗಿದ್ದ ಸ್ನೇಹಿತನ ಆಟೋ‌ ತರಲು ಹೋದ ವ್ಯಕ್ತಿ ಅಪಘಾತದಲ್ಲಿ ದುರ್ಮರಣ

ವಿರಾಜಪೇಟೆ: ಅನಾರೋಗ್ಯ ಪೀಡಿತನಾಗಿದ್ದ ಸ್ನೇಹಿತನ ಆಟೋ‌ ತರಲು ಹೋದ ವ್ಯಕ್ತಿ ಅಪಘಾತದಲ್ಲಿ ದುರ್ಮರಣ
ಮೃತಪಟ್ಟ ವ್ಯಕ್ತಿ

ವಿರಾಜಪೇಟೆ: ಅನಾರೋಗ್ಯ ಪೀಡಿತನಾಗಿದ್ದ ಸ್ನೇಹಿತನ ನಿಲುಗಡೆಗೊಳಿದ್ದ ವಾಹನ ತರಲುಹೋದ ವ್ಯಕ್ತಿ ರಸ್ತೆ ಅಪಘಾತದಲ್ಲಿ ದುರ್ಮರಣಹೊಂದಿದ ಘಟನೆ ವಿರಾಜಪೇಟೆ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ದೇವಣಗೇರಿ ಗ್ರಾಮದ ಬಾಳಕೇರಿ ಪೈಸಾರಿ ನಿವಾಸಿ ಪೂಣಿ ಎಂಬುವವರ ಪುತ್ರ ಚಾಲಕ ಮತ್ತು ಕೂಲಿ ಕಾರ್ಮಿಕ ಹೆಚ್.ಬಿ. ವಿನೋದ್ (38) ಅಪಘಾತದಲ್ಲಿ ದುರ್ಮರಣ ಹೊಂದಿದ ವ್ಯಕ್ತಿ.

ಘಟನೆಯ ವಿವರ:

ಮೃತ ವ್ಯಕ್ತಿ ಹಲವು ವರ್ಷಗಳ ಹಿಂದೆ ಆಟೋ ಚಾಲಕನಾಗಿ ದುಡಿಯುತಿದ್ದ ಎನ್ನಲಾಗಿದೆ.ನಂತರದಲ್ಲಿ ಚಾಲಕ ವೃತ್ತಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತಿದ್ದ. ಮೃತ ವಿನೋದ್ ವಿವಾಹಿನಾಗಿ ಒಂದು ಮಗುವಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.ದಿನಾಂಕ 20-08-2025 ರಂದು ದೇವಣಗೇರಿ ನಿವಾಸಿಯಾಗಿದ್ದ ಮೃತನ ಸ್ನೇಹಿತ ದೇವಯ್ಯ ಎಂಬುವವರು ಅನಾರೋಗ್ಯದಿಂದ ಬಳಲುತಿದ್ದರು. ಇವರು ಹೊಂದಿರುವ ಅಟೋ ಒಂಟಿಅಂಗಡಿ ಗ್ರಾಮದಲ್ಲಿ ನಿಲುಗಡೆಗೊಳಿಸಲಾಗಿತ್ತು. ಸ್ನೇಹಿತನು ಮೃತನಾದ ವಿನೋದ್ ಗೆ ನಿಲುಗಡೆಗೊಳಿಸಿದ್ದ ಆಟೋವನ್ನು ಮನೆಗೆ ತರಲು ಸೂಚಿಸಿದ್ದರು ಎನ್ನಲಾಗಿದೆ. ಸ್ನೇಹಿತನ ಬಳಿಯಿಂದ ಕೀಲಿ ಕೈ ಪಡೆದುಕೊಂಡು ಒಂಟಿಅಂಗಡಿ ತೆರಳಿದ್ದ ವಿನೋದ್ ಸ್ನೇಹಿತನ ಆಟೋ ಸಂಖೆಯ ಕೆಎ-12ಎ-7240 ಚಾಲನೆ ಮಾಡಿಕೊಂಡು ಮನೆಯತ್ತಾ ತೆರಳಿದ್ದ. ಸಂಜೆ ಸುಮಾರು 6-45 ಸಮಯದಲ್ಲಿ ಕಣ್ಣಂಗಾಲ- ಚೆಂಬೆಬೆಳ್ಳೂರು- ವಿರಾಜಪೇಟೆ ತೆರಳುವ ಮಾರ್ಗದಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಮಾರೂತಿ ಶಿಫ್ಟ್ ಡಿಸೈಯರ್ ಕಾರು ಸಂಖ್ಯೆ ಕೆಎ-12ಎಂಬಿ-1871 ಆಟೋ ಗೆ ಅಪ್ಪಳಿಸಿದೆ. (ಡಿಕ್ಕಿ ಪಡಿಸಿದೆ) ಪರಿಣಾಮ ಆಟೋ ಚಾಲನೆಯಲ್ಲಿದ್ದ ವಿನೋದ್ ತಲೆಭಾಗಕ್ಕೆ ಗಾಂಭೀರವಾಗಿ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೇವಣಗೇರಿ ಗ್ರಾಮದ ನಿವಾಸಿ ಹೆಚ್.ವಿ. ವಸಂತ ಎಂಬುವವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕ ಕಟ್ಟೆಮಾಡು ನಿವಾಸಿ ಪೌತಿ ಅಪ್ಪಚ್ಚು ಎಂಬುವವರ ಪುತ್ರ ನಂದೇಟಿರ ತಮನ್ ಪೊನ್ನಣ್ಣ (26)ವರ್ಷ ಮೇಲೆ ಅತಿವೇಗ ಅಜಾಗರುಕತೆಯಿಂದ ವಾಹನ ಚಾಲನೆ ವ್ಯಕ್ತಿ ದುರ್ಮರಣ ಬಿ.ಎನ್.ಎಸ್. 106 (1), 281 ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಒಳಗಾದ ವಾಹನಗಳನ್ನು ವಶಕ್ಕೆ ಪಡೆದಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ:ಕಿಶೋರ್ ಕುಮಾರ್ ಶೆಟ್ಟಿ