ವಿರಾಜಪೇಟೆ; ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

Apr 28, 2026 - 21:41
 0  199
ವಿರಾಜಪೇಟೆ; ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ವಿರಾಜಪೇಟೆ: ಇತಿಹಾಸ ಪ್ರಸಿದ್ಧ ವಿರಾಜಪೇಟೆ ನಗರದ ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ದ ವಾರ್ಷಿಕ ಕರಗ ಮಾಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ವಿರಾಜಪೇಟೆ ನಗರದ ಶ್ರೀ ಕಂಚಿ ಕಾಮಾಕ್ಷಿ ರಸ್ತೆಯ ( ಮಲಬಾರ್ ರಸ್ತೆ) ಯಲ್ಲಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ಕ್ಕೆ ಚಾಲನೆ ನೀಡಲಾಯಿತು.

 ಇಂದು ಮುಂಜಾನೆ ದೇವಲಯದಲ್ಲಿ ಗಣಪತಿ ಹೋಮದೊಂದಿಗೆ ಕರಗ ಮಹೋತ್ಸವ ಕ್ಕೆ ಚಾಲನೆ‌ ನೀಡಲಾಯಿತು. ಬಳಿಕ ಸಂಜೆ ತೆಲುಗರ ಬೀದಿಯ ಶ್ರೀ ದಕ್ಷಿಣ ಮಾರಿಯಮ್ಮ ದೇಗುಲದಲ್ಲಿ ಎರಡು ಕರಗಗಳಾದ ಕಂಚಿ ಕಾಮಾಕ್ಷಿ ಕರಗ, ಮಾರಿಯಮ್ಮ ಕರಗಗಳಿಗೆ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ತೆಲುಗರ ಬೀದಿ,ಜೈನರ ಬೀದಿ,ಎಫ್. ಎಂ.ಸಿ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ದೇವಾಲಯ ತಲುಪಿತು. ಮಾರ್ಗದುಕ್ಕೂ ಕರಗಗಳಿಗೆ ಭಕ್ತರಿಂದ ಭಕ್ತಿಯಿಂದ ಪೂಜೆಗಳು ಸಲ್ಲಿಕೆಯಾದವು.ದೇವಾಲಯ ದಲ್ಲಿ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಿತು.

ಆಗಮಿಕ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ತಾ.29 ರಂದು ಮದ್ಯಾಹ್ನ ಕಂಚಿ ಕಾಮಾಕ್ಷಿ ಅಮ್ಮನವರಿಗೆ ವಿಶೇಷ ಅಲಂಕಾರ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಮಹಾಪೂಜೆ ಸಲ್ಲಿಕೆಯಾಗಲಿದ್ದು ತದ ನಂತರ ಅನ್ನಸಂತರ್ಪಣೆ ನಡೆಯಲಿದೆ.

ತಾ. 30 ರಂದು ಮಧ್ಯಾಹ್ನ ಕಂಚಿ ಕಾಮಾಕ್ಷಿ ಅಮ್ಮ ಅವರಿಗೆ ವಿಶೇಷ ಮಹಾಪೂಜೆ ಅನ್ನಸಂತರ್ಪಣೆ ಹಾಗೂ ಶ್ರೀ ಮಾರಿಯಮ್ಮ ದೇವಿಯ ಕರಗ ವಿಸರ್ಜನೆ ನಡೆಯಲಿದೆ. ಕರಗಗಳ ಮೆರವಣಿಗೆಯಲ್ಲಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಕುಲಬಾಂದವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. 

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1