ವಿರಾಜಪೇಟೆ;ಬಿಜೆಪಿ ಪ್ರತಿಭಟನೆ ಹಾಸ್ಯಸ್ಪದ; ಪಿ.ವಿ ಜಾನ್ಸನ್

Apr 30, 2026 - 19:15
 0  306
ವಿರಾಜಪೇಟೆ;ಬಿಜೆಪಿ ಪ್ರತಿಭಟನೆ ಹಾಸ್ಯಸ್ಪದ; ಪಿ.ವಿ ಜಾನ್ಸನ್

ವಿರಾಜಪೇಟೆ: ಕೊಡಗಿನಲ್ಲಿ ವನ್ಯ ಪ್ರಾಣಿಗಳ ಹಾವಳಿ ಎ.ಎಸ್. ಪೊನ್ನಣ್ಣನವರು ಶಾಸಕರಾಗಿ ಬಂದಮೇಲೆ ಉದ್ಭವ ಆಗಿರುವುದಲ್ಲ. ಬಿಜೆಪಿಯವರು ಅರಣ್ಯ ಇಲಾಖೆ ನಡೆಸಿದ ಪ್ರತಿಭಟನೆ ಹಾಸ್ಯಸ್ಪದ ಎಂದು ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪಿ.ವಿ. ಜಾನ್ಸನ್ ಹೇಳಿದರು.

 ವಿರೋಧ ಪಕ್ಷದವರು ಅರಣ್ಯ ಕಚೇರಿಗೆ ಮುತ್ತಿಗೆ ನಡೆಸಿದ ವಿಚಾರವಾಗಿ ಮಾತನಾಡಿದ ಜಾನ್ಸನ್ ಅವರು, ಶಾಸಕರು ಬೇರೆ ಜಿಲ್ಲೆಯಿಂದ ಕಾಡಾನೆಯನ್ನು ತಂದು ನಮ್ಮ ಜಿಲ್ಲೆಯಲ್ಲಿ ಬಿಟ್ಟಿದ್ದಾರ ಎಂದು ಬಿಜೆಪಿ ಪಕ್ಷಕ್ಕೆ ಪ್ರಶ್ನೆ ಮಾಡಿದ್ದಾರೆ.

 ವಿರೋಧ ಪಕ್ಷದವರು ಮೊದಲು ತಿಳಿದುಕೊಳ್ಳಬೇಕು, ವನ್ಯಪ್ರಾಣಿ ಸಮಸ್ಯೆ ಎ.ಎಸ್. ಪೊನ್ನಣ್ಣನವರು ಶಾಸಕರಾಗಿ ಆಯ್ಕೆಯಾಗಿ ಬಂದಮೇಲೆ ಉದ್ಭವ ಆಗಿರುವ ಸಮಸ್ಯೆಯಲ್ಲ. ಬೇರೆ ಜಿಲ್ಲೆಯಿಂದ ಆನೆಗಳನ್ನು ಶಾಸಕರು ನಮ್ಮ ಜಿಲ್ಲೆಯಲ್ಲಿ ತಂದು ಬಿಟ್ಟಿದಾರ ಎಂದು ಪ್ರಶ್ನೆ ಮಾಡಿದರು.

ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು ಬಿಟ್ಟು ಪರಿಹಾರ ಏನು ಹೇಗೆ ಅನ್ನುವದರ ಬಗ್ಗೆ ಚರ್ಚೆ ಮಾಡಬೇಕಿದೆ ನಮ್ಮ ಸಾಸಕರು ಪರಿಹಾರ ಇದ್ದರೆ ಹೇಳಿ ಒಟ್ಟಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ ಎಂದು ವಿನಂತಿ ಮಾಡಿದ್ದರೂ ಇದಕ್ಕೆ ಯಾರೊಬ್ಬರೂ ಕಿವಿಗೋಡದೆ ಈ ರೀತಿಯ ಅಸಂಬದ್ಧ ರೀತಿಯಲ್ಲಿ ಮುತ್ತಿಗೆ ಹೆಸರಲ್ಲಿ ಶಾಸಕರಿಗೆ ದಿಕ್ಕಾರ ಕೂಗುವುದು ಇದು ವಿರೋಧ ಪಕ್ಷದವರಿಗೆ ಶೋಭೆ ತರುವಂತದಲ್ಲ ಎಂದು ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0