ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್ ವತಿಯಿಂದ SIR ಬಗ್ಗೆ ಮಾಹಿತಿ ಶಿಬಿರ

Jun 20, 2026 - 20:50
 0  311
ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್ ವತಿಯಿಂದ SIR ಬಗ್ಗೆ ಮಾಹಿತಿ ಶಿಬಿರ

ವಿರಾಜಪೇಟೆ, ಜೂನ್ 20: ಚುನಾವಣಾ ಆಯೋಗದ ಎಸ್ಐಆರ್ (SIR - Special Intensive Revision) ಕುರಿತು ಮಾಹಿತಿ ಶಿಬಿರವು ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯಿತು. ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಶಿಬಿರದಲ್ಲಿ ಭಾಗವಹಿಸಿದರು.

 ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆದ ಶಿಬಿರದಲ್ಲಿ ವಿರಾಜಪೇಟೆ ಬ್ಲಾಕ್ ವ್ಯಾಪ್ತಿಯ ಎಲ್ಲಾ ಬಿಎಲ್ಎ-2 ಗಳು ಹಾಗೂ ಆಹ್ವಾನಿತ ಪ್ರಮುಖರು ಭಾಗವಹಿಸಿದ್ದರು. SIR ನಡೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಶಿಬಿರದಲ್ಲಿ ಮಾಹಿತಿ ಒದಗಿಸಲಾಯಿತು. ಕೆಪಿಸಿಸಿ ವತಿಯಿಂದ ಆಗಮಿಸಿದ ಪ್ರಮುಖರು SIR ಸಂದರ್ಭದಲ್ಲಿ ಅಧಿಕೃತ ಬಿಎಲ್ಎ-2 ರವರು ಕೈಗೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಹಾಗೂ ಮತದಾರರ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಜಾಗೃತ ಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

 ಈ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮಹಿಳಾ ಬ್ಲಾಕ್ ಅಧ್ಯಕ್ಷೆ ನಯನ, ವಲಯ ಅಧ್ಯಕ್ಷ ಬೋಪಣ್ಣ, ಎಲ್ಲಾ ವಲಯ ಅಧ್ಯಕ್ಷರುಗಳು, ಬೂತ್ ಅಧ್ಯಕ್ಷರುಗಳು, ಅಲ್ಪಸಂಖ್ಯಾತ ಘಟಕ, ಕಾರ್ಮಿಕ ಘಟಕ, ಎಸ್‌ಟಿ ಘಟಕ, ಓಬಿಸಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿಎಲ್ಎಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 0
Sad Sad 1
Wow Wow 0