ವಿರಾಜಪೇಟೆ: ಲವ್ ಬ್ರೇಕ್ ಅಪ್ :ಪ್ರೀತಿಸಿದ ಹುಡುಗಿಯ ಮದುವೆ, ನೊಂದ ಯುವಕ ಆತ್ಮಹತ್ಯೆಗೆ ಶರಣು

ವಿರಾಜಪೇಟೆ: ಲವ್ ಬ್ರೇಕ್ ಅಪ್ :ಪ್ರೀತಿಸಿದ ಹುಡುಗಿಯ ಮದುವೆ, ನೊಂದ ಯುವಕ ಆತ್ಮಹತ್ಯೆಗೆ ಶರಣು

ವಿರಾಜಪೇಟೆ: ಪ್ರೀತಿಸಿದ ಯುವತಿಯ ಮದುವೆ ದಿನ ತಿಳಿದ ಯುವಕ ನೊಂದು ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಿಟ್ಟಂಗಾಲ ಪೆಗ್ಗರಿಕಾಡ್ ಗ್ರಾಮದಲ್ಲಿ ನಡೆದಿದೆ.

 ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡ್ ಪೈಸಾರಿ ನಿವಾಸಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದಿವಂಗತ ಹೆಚ್.ಎಂ. ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

 ಘಟನೆಯ ವಿವರ: ದಿವಂಗತ ಕಾಳಯ್ಯ ದಂಪತಿಗಳಿಗೆ ಮೂವರು ಮಕ್ಕಳು. ಈರ್ವರು ಹೆಣ್ಣುಮಕ್ಕಳು ಮತ್ತು ಒರ್ವ ಗಂಡು ಮಗ.ಹೆಣ್ಣು ಮಕ್ಕಳಿಗೆ ಮದುವೆಯಾಗಿ ಸುಖಿ ಸಂಸಾರದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮೃತ ಸುಮಂತ್ ಗೆ ಕೆಲವು ವರ್ಷಗಳ ಹಿಂದೆ ಯುವತಿಯೋರ್ವಳ ಪರಿಚಯವಾಗಿದೆ.

ಪರಿಚಯ ಪ್ರಣಯವಾಗಿ ಮೊಳಕೆಯೊಡೆದು ಪ್ರೀತಿ ಗೆ ತಿರುಗಿತು ( ಒನ್ ಸೈಡ್ ಲವ್).ಯುವತಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಹಿನ್ನೆಲೆಯಲ್ಲಿ ಯುವಕ ಪ್ರೀತಿ ಪ್ರೇಮದಿಂದ ಬೇರ್ಪಟ್ಟು ( ಬ್ರೇಕ್ ಅಪ್ ಲವ್) ಹೊಸ ಜೀವನ ಆರಂಭಿಸುವ ಹಂತಕ್ಕೆ ಬಂದಿದ್ದಾನೆ. ಬೆಂಗಳೂರು ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಗಿಟ್ಟಿಸಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಆಪ್ತ ಸ್ನೇಹಿತರು ಹೇಳಿಕೊಂಡಿದ್ದಾರೆ. ಖಾಸಗಿ ಉದ್ಯೋಗ ತ್ಯಜಿಸಿ ಮನೆಗೆ ಬಂದು 06 ತಿಂಗಳಾಗಿದೆ.

ಖಾಸಗಿ ವಾಹನಗಳ ಚಾಲನ ವೃತ್ತಿಗೆ ತೆರಳುತಿದ್ದ ಎನ್ನಲಾಗಿದೆ.ಮೃತನಿಗೆ ಪ್ರೇಯಸಿಯ ಮದುವೆ ಇದೇ ತಿಂಗಳ 18,19 ರಂದು ನಿಗದಿಯಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ. ತಾ.18 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿದ್ದ ತೋಟಕ್ಕೆ ಬಳಸುವ ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ.

ಸಂಜೆ ವೇಳೆಗೆ ಮನೆಗೆ ಬಂದ ತಾಯಿ ವಿಷಯ ತಿಳಿದು ಮಕ್ಕಳಿಗೆ ತಿಳಿಸಿದ್ದಾರೆ. ತಕ್ಷಣವೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆ ಗೆ ಮಡಿಕೇರಿ ಗೆ ರವಾನಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತನ ಸ್ವಗೃಹದಲ್ಲಿ ಕೊನೆಯುಸಿರು ಎಳೆದಿದ್ದಾನೆ.

ಮೃತನ ಅಕ್ಕಾ ಪೂರ್ಣಿಮಾ ಅವರು ನೀಡಿರುವ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಿ.ಎನ್.ಎಸ್.194 ರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

 ವರದಿ:ಕಿಶೋರ್ ಕುಮಾರ್ ಶೆಟ್ಟಿ