ವಿರಾಜಪೇಟೆ; ಅರಸು ನಗರ ಶ್ರೀ ಮುತ್ತಪ್ಪ ಪುನರ್ ಪ್ರತಿಷ್ಠಾಪನೆ ಮತ್ತು ತೆರೆ ಮಹೋತ್ಸವ

Mar 29, 2026 - 23:27
 0  149
ವಿರಾಜಪೇಟೆ; ಅರಸು ನಗರ ಶ್ರೀ ಮುತ್ತಪ್ಪ ಪುನರ್ ಪ್ರತಿಷ್ಠಾಪನೆ   ಮತ್ತು ತೆರೆ ಮಹೋತ್ಸವ

ವಿರಾಜಪೇಟೆ; ದೇಗುಲದಲ್ಲಿ ತಂತ್ರಿ ವರ್ಯರ ಉಪ ಆದೇಶದ ಮೇರೆಗೆ ದೇಗುಲದ ಸಾನಿಧ್ಯಗಳನ್ನು ನವೀಕರಿಸಿ, ದೇಗುಲ ಪುನರ್ ಪ್ರತಿಷ್ಠಾಪನ ಮಹೋತ್ಸವ ಮತ್ತು ವಾರ್ಷಿಕ ತೆರೆ ಮಹೋತ್ಸವ ದೈವ ಕಾರ್ಯಗಳೊಂದಿಗೆ ಸಂಪನ್ನಗೊಂಡಿತ್ತು. ವಿರಾಜಪೇಟೆ ನಗರದ ಅರಸು ನಗರದ ಶ್ರೀ ಮುತ್ತಪ್ಪ ದೇಗುಲದಲ್ಲಿ ಎರಡು ದಿನಗಳ ಕಾಲ ನಡೆದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ವಾರ್ಷಿಕ ತೆರೆ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ನೆರವೇರಿತು. ತಾ.26 ರಂದು ಬೆಳಿಗ್ಗೆ ಕಳಶ ಪ್ರತಿಷ್ಟೆ ನಡೆಯಿತು.

ಕೇರಳ ರಾಜ್ಯದ ಪ್ರಸಿದ್ಧ ತಂತ್ರಿಗಳಾದ ಬ್ರಹ್ಮ ಶ್ರೀ ಶ್ರೀ ಕುಮಾರ್ ಅವರ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ತಾ. 27 ರಂದು ಮುಂಜಾನೆ ಗಣಪತಿ ಹೋಮದೊಂದಿಗೆ ಆರಂಭವಾಗಿ ಕಳಶ ಪ್ರತಿಷ್ಠೆ ನಡೆಯಿತು. ಶ್ರೀ ಮುತ್ತಪ್ಪನ್ ಶ್ರೀ ತಿರುವಪ್ಪನ್, ಮತ್ತು ಶ್ರೀ ಗುಳಿಗನ್ ದೇವರುಗಳ ಪ್ರತಿಷ್ಟೆ ನಡೆದು ಕಳಶಾಭಿಷೇಕ ನಡೆಯಿತು ಬಳಿಕ ನಿತ್ಯ ಪೂಜೆ ಹಾಗೂ ಮಾಹಾಪೂಜೆ ನೆರವೇರಿತು. ಎರಡು ದಿನಗಳ ಕಾಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ತಾ.28 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯದೊಂದಿಗೆ.ವಾರ್ಷಿಕ ತೆರೆ ಮಹೋತ್ಸವ ಕ್ಕೆ ಚಾಲನೆ ನೀಡಲಾಯಿತು. ಸಂಜೆ 4 ಗಂಟೆಗೆ ಮುತ್ತಪ್ಪನ್ ಮಲೆ ಇಳಿಸುವುದು ನಡೆದು ಮುತ್ತಪ್ಪನ್ ವೆಳ್ಳಾಟಂ ನಡೆಯಿತು. ಬಳಿಕ ತೆಲುಗರ ಬೀದಿ ಶ್ರೀ ಮಾರಿಯಮ್ಮ ದೇವಲಯದಿಂದ ತಾಲಪೋಲಿ, ಹೆಣ್ಣು ಮಕ್ಕಳು ಮತ್ತು ಹೆಂಗಳೆಯರಿಂದ ಹಣತೆ ಸೇವೆ. ಚೆಂಡೆ ಮದ್ದಳೆ, ಸಿಡಿ ಮದ್ದು ಪ್ರದರ್ಶನ ಮೆರೆವಣೆಗೆಯಲ್ಲಿ ಸಾಗಿ, ಜೈನಬೀದಿ, ದೊಡ್ಡಟ್ಟಿ ಚೌಕಿ, ಚರ್ಚ್ ರಸ್ತೆಗಾಗಿ ದೇವಾಲಯವನ್ನು ತಲುಪಿತು.

 ಶ್ರೀ ಮುತ್ತಪ್ಪನ್ ಮತ್ತು ಗುಳಿಗನ್ ದೈವಗಳ ತೆರೆ ಪ್ರದರ್ಶನ ನಡೆಯಿತು ಬಳಿಕ ಸ್ಥಳಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ತಾ. 29 ರ ಪ್ರಾಥ:ಕಾಲ 03 ಗಂಟೆಗೆ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆದು. ಶ್ರೀ ಗುಳಿಗನ್ ಕೊಲಂ ಮತ್ತು ವೆಳ್ಳಾಟಂ , ಶ್ರೀ ಮುತ್ತಪ್ಪನ್ ಮತ್ತು ತಿರುವಪ್ಪನ್ ಕೊಲಗಳು ನಡೆದವು ಮದ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ತೆರೆ ಮಹೋತ್ಸವ ಸಂಪನ್ನಗೊಂಡಿತು. ಶ್ರೀ ಮುತ್ತಪ್ಪನ್ ದೇವಾಲಯ ಅರಸು ನಗರ ಆಡಳಿತ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು, ನಗರದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ತೆರೆ ಮಹೋತ್ಸವ ದಲ್ಲಿ ಭಾಗಿಗಳಾಗಿ ದೈವಗಳ ಕೃಪೆಗೆ ಪಾತ್ರರಾದರು.

ವರದಿ; ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0