ವಿರಾಜಪೇಟೆ:ಬೈಕ್ ಕಳವು ಪ್ರಕರಣ,ಮೂವರ ಬಂಧನ

Mar 23, 2026 - 09:51
 0  1k
ವಿರಾಜಪೇಟೆ:ಬೈಕ್ ಕಳವು ಪ್ರಕರಣ,ಮೂವರ ಬಂಧನ

ವೀರಾಜಪೇಟೆ, ಮಾ. 22: ಮನೆ ಮುಂದೆ ನಿಲುಗಡೆಗೊಳಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವೀರಾಜಪೇಟೆ ನಗರದಲ್ಲಿ ಬಂಧಿಸಲಾಗಿದೆ. ನಾಪೋಕ್ಲು ಎಮ್ಮೆಮಾಡು ನಿವಾಸಿ. ಕೆ.ಎಂ. ಮಹಮ್ಮದ್ ಫರೀದ್ (28), ಆಸೀಫ್ (30) ಹಾಗೂ ಅಜ್ಜಿಮೊಟ್ಟೆ ಕಾಲೋನಿ ನಾಪೋಕ್ಲು ನಿವಾಸಿ ಎಂ.ಯು. ಗಣೇಶ್ ಬಂಧಿತ ಆರೋಪಿಗಳು.

ವೀರಾಜಪೇಟೆ ನಗರದ ಮೊಗರಗಲ್ಲಿ ನಿವಾಸಿ ಪೌರಕಾರ್ಮಿಕ ಹೆಚ್. ತ ಎಸ್. ಸುಬ್ರಮಣಿ ಎಂಬವರಿಗೆ ಸೇರಿದ ಹೀರೊ ಹೊಂಡಾ ಶೈನ್ ಸಂಖ್ಯೆ ಕೆಎ12 7989 ತಾ. 16 ರಂದು ರಾತ್ರಿ ಕಳ್ಳತನವಾಗಿತ್ತು. ವಾಹನ - ಮಾಲೀಕರು ಖಾಸಗಿ ಕಾರ್ಯಕ್ರಮ ನಿಮಿತ್ತ ತಮಿಳುನಾಡಿಗೆ ತೆರಳಿದ್ದರು. ತಾ. 17 ರಂದು ಮುಂಜಾನೆ ಮಾಲೀಕರ ಸಂಬಂಧಿಕರು ದೂರವಾಣಿ ಕರೆ ಮಾಡಿ ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 ತಾ. 18 ರಂದು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂದಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ಉಪವಿಭಾಗ ಡಿ.ವೈಎಸ್ಪಿ. ಮಹೇಶ್ ಕುಮಾರ್ ಎಸ್.. ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಪ್ರಮೋದ್ ಮತ್ತು ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ. ಕಾವೇರಪ್ಪ ಟಿ.ಎಂ. ಮತ್ತು ಅಪರಾಧ ಪತ್ತೆ ಕರ್ತವ್ಯನಿರತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0