ಸೋಮವಾರಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಶ್ವ ಕುಂಬೂರು ಅವಿರೋಧ ಆಯ್ಕೆ
ಸೋಮವಾರಪೇಟೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಶ್ವ ಕುಂಬೂರು ಅವಿರೋಧ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ವಿಜೇತ್ ಎಸ್. ಡಿ., ಪ್ರಧಾನ ಕಾರ್ಯದರ್ಶಿಯಾಗಿ ಭಾಸ್ಕರ್ H. K., ಖಜಾಂಚಿಯಾಗಿ ಭಾಸ್ಕರ್. B. A, ನಿರ್ದೇಶಕರಾಗಿ ರವಿ ಹಿರಿಕರ, ಲಕ್ಷ್ಮಿ ಕಾಂತ್ ಕೋಮರಪ್ಪ,ಚೆರಿಯಮನೆ ಸುರೇಶ್, ವಿಜಯ್ ಹಾನಗಲ್, ದಿನೇಶ್ ಮಾಲಂಬಿ ಇಂದು ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ, ವೀಕ್ಷಕರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ನವೀನ್ ಸುವರ್ಣ ನಡೆಸಿಕೊಟ್ಟರು.