ನಂಜರಾಯಪಟ್ಟಣ ದಾಸವಾಳ ಗ್ರಾಮದಲ್ಲಿ ಕಾಡಾನೆ ದಾಳಿ:ಸೋಲಾರ್ ಬೇಲಿ,ಕಾಫಿ ಗಿಡಗಳನ್ನು ನಾಶಪಡಿಸಿದ ಕಾಡಾನೆ
ಕುಶಾಲನಗರ:ನಂಜರಾಯಪಟ್ಟಣ ಗ್ರಾಮದ ದಾಸವಾಳದಲ್ಲಿ ಇತ್ತೀಚಿಗೆ ಕಾಡಾನೆಯ ಹಾವಳಿ ಮಿತಿಮೀರಿದೆ. ಸೋಮವಾರ ರಾತ್ರಿ ಇಶಾನಿರವರ ತೋಟಕ್ಕೆ ಕಾಡಾನೆಯು ಲಗ್ಗೆಯಿಟ್ಡು ಸೋಲಾರ್ ಬೇಲಿಯನ್ನು ಮುರಿದು ಹಾಕಿದೆ. ಕಾಡಾನೆಯು ಕಾಫಿ ಗಿಡವನ್ನು ಹಾಗೂ ಅಡಿಕೆ ಮರವನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು,ಶಾಶ್ವತ ಪರಿಹಾರ ಕ್ರಮವನ್ನು ತೆಗೆದುಕೊಂಡು ಪರಿಹಾರ ಒದಗಿಸಿಕೊಡಬೇಕಾಗಿ ಸಮಸ್ತ ದಾಸವಾಳ ಗ್ರಾಮದ ಜನರು ಒತ್ತಾಯಿಸಿದ್ದಾರೆ.