ಹೊಸಕೋಟೆ ಕಾಡಾನೆ ಸಾವು

Jun 4, 2026 - 21:35
 0  1.3k
ಹೊಸಕೋಟೆ ಕಾಡಾನೆ ಸಾವು

ಸುಂಟಿಕೊಪ್ಪ,ಜೂ.4: 7ನೇ ಹೊಸಕೋಟೆ ತೊಂಡೂರು ಸಲಿಯವರ ಮನೆಯ ಹಿಂಭಾಗದಲ್ಲಿ ಕಾಡಾನೆಯೊಂದು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

ಗುರುವಾರದಂದು ಆನೆಯ ಸಾವು ಬೆಳಕಿಗೆ ಬಂದಿದ್ದು, ಬುಧವಾರ ರಾತ್ರಿ ವೇಳೆ ಆಹಾರ ಅರಸಿ ಬಂದ ಕಾಡಾನೆ ಅಂದಾಜು 20 ರಿಂದ 25 ವರ್ಷ ಪ್ರಾಯದ ಗಂಡಾನೆ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಕಾಡಾನೆಯು ಕೆಸರಿನಲ್ಲಿ ಹೂತುಕೊಂಡಿರುವ ಸ್ಥಿಯಲ್ಲಿದ್ದು ಮೇಲೇಳಲು ಆಗದೆ ಉಸಿರುಗಟ್ಟಿ ಸತ್ತಿರಬಹುದೆಂದು ಅಂದಾಜಿಸಲಾಗಿದೆ.

ಆನೆಯ ಶವವನ್ನು ಕೊಂಡೋಯ್ದು ಅರಣ್ಯ ಇಲಾಖೆಯ ವೈಧ್ಯರಾದ ಡಾ. ಮುಜಿಬು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೇ ನಡೆಸಲಾಯಿತು. ಸ್ಥಳದಲ್ಲಿ ಎಸಿಎಫ್ ನವೀನ್‌ಕುಮಾರ್, ಕುಶಾಲನಗರ ವಲಯ ಆರ್‌ಎಫ್‌ಓ ರಕ್ಷೀತ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 1
Sad Sad 3
Wow Wow 0