ನರಿಯಂದಡ -ಕಕ್ಕಬ್ಬೆ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ: 12 ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

ನರಿಯಂದಡ -ಕಕ್ಕಬ್ಬೆ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ: 12 ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನರಿಯಂದಡ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ನರಿಯಂದಡ,ಚೇಲಾವರ ಕೋಕೇರಿ,ಕರಡ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕೃಷಿ ಫಸಲುಗಳನ್ನು ಹಾನಿ ಪಡಿಸಿ, ಭಯದ ವಾತಾವರಣ ಸೃಷ್ಟಿಸುತ್ತಿದ್ದ ಕಾಡಾನೆಗಳ ಹಿಂಡುಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ಎರಡು ದಿನಗಳಿಂದ ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆ ಸಂದರ್ಭದಲ್ಲಿ ಮರಿಯಾನೆಗಳು ಸೇರಿದಂತೆ 10 ಕ್ಕೂ ಅಧಿಕ ಕಾಡಾನೆಗಳಿದ್ದು ಕಾರ್ಯಾಚರಣೆ ಸಂದರ್ಭ ಕಾಡಾನೆಗಳ ಗುಂಪು ಬೇರ್ಪಟ್ಟು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಸುಳಿ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಆಟವಾಡಿಸಿದ ಪ್ರಸಂಗ ನಡೆದರು ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ನಡೆಸಿ ಸಮೀಪದ ಬಿದ್ದಂಡತಟ್ಟು ಕಾಡಿಗೆ ಹಾಗೂ ಪದಿನಾಲ್ಕುನಾಡು ಕೆರಟಿ ಕಾಡಿಗೆ ಕಾಡಾನೆಗಳನ್ನು ಓಡಿಸಿದ್ದಾರೆ. ಎರಡನೇ ದಿನದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯವರು 2 ಗುಂಪುಗಳಾಗಿ ಕಾರ್ಯಚರಣೆ ನಡೆಸಿದರು.

 ಅರಣ್ಯಾಧಿಕಾರಿಗಳ ಒಂದು ಗುಂಪು ತೋಟದಲ್ಲಿ ಬೀಡುಬಿಟ್ಟಿದ್ದ 8 ಕಾಡಾನೆಗಳನ್ನು ಕೋಚನಕಾಡು, ಚೇಲಾವರ ಮೂಲಕ ಮಲೆತಿರಿಕೆ ಬೆಟ್ಟಕ್ಕೆ ಓಡಿಸಿದರು. ಅರಣ್ಯ ಇಲಾಖೆಯ ಮತ್ತೊಂದು ಗುಂಪು 3 ಆನೆ ಹಾಗೂ 1 ಮರಿಯಾನೇಯನ್ನು ಕೋಚನಕಾಡು,ಚೇಲಾವರ, ಮರಂದೋಡ ಮೂಲಕ ಕೆರೆತಟ್ಟು ಬೆಟ್ಟಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ರಾಮ ವ್ಯಾಪ್ತಿಯಲ್ಲಿ ಇನ್ನು ಕೂಡ ಹಲವು ಕಾಡಾನೆಗಳಿದ್ದು ಮುಂದಿನ ದಿನಗಳಲ್ಲಿ ಅದನ್ನು ಕೂಡ ಕಾಡಿಗೆ ಓಡಿಸಲಾಗುವುದು ಎಂದು ಅರಣ್ಯಧಿಕಾರಿಗಳು ತಿಳಿದ್ದಾರೆ. ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಡಿಆರ್ ಎಫ್ ಒ ಶ್ರೀನಿವಾಸ್,ಇಟಿಎಫ್ ಡಿ ಆರ್ ಎಫ್ ಒ ದೇವರಾಜ್, ಇಟಿಎಫ್ ತಂಡ,ಆರ್ ಆರ್ ಟಿ ತಂಡಗಳು, ಕ್ಯಾಂಪ್ ಸಿಬ್ಬಂದಿಗಳು ಕಾರ್ಯ ಚರಣೆಯಲ್ಲಿ ಪಾಲ್ಗೊಂಡಿದ್ದರು.