ಐಚೆಟ್ಟಿರ ಐನ್ ಮನೆಯಲ್ಲಿ ನಡೆದ ವಿಶ್ವ ಕಲಾ ದಿನಾಚರಣೆ

Apr 17, 2026 - 12:22
 0  356
ಐಚೆಟ್ಟಿರ ಐನ್ ಮನೆಯಲ್ಲಿ ನಡೆದ ವಿಶ್ವ ಕಲಾ ದಿನಾಚರಣೆ

ವಿರಾಜಪೇಟೆ: ಮೈತಾಡಿ ಗ್ರಾಮದ ಐಚೆಟ್ಟಿರ ಐನ್‌ಮನೆಯ ಅಂಗಳದಲ್ಲಿ ವಿಶ್ವ ಕಲಾದಿನ ಪ್ರಯುಕ್ತ ಚಿತ್ರಕಲಾವಿದ ಬಿ.ಆರ್ ಸತೀಶ್ ರವರು ದೈವ ಕೋಲದ ಚಿತ್ರ ಬಿಡಿಸುವ ಮೂಲಕ ಆಚರಿಸಲಾಯಿತು.

ವಿಶ್ವ ಕಲಾ ದಿನದ ಬಗ್ಗೆ ಮಾತನಾಡಿದ ಕಲಾವಿದ ಸತೀಶ್ ಎಪ್ರಿಲ್ 15 ರಂದು ವಿಶ್ವ ಕಲಾದಿನವೆಂದು ಘೋಷಿಸಲಾಯಿತು. ವಿಶ್ವದ ಶ್ರೇಷ್ಠ ಚಿತ್ರ ಕಲಾವಿದರಲ್ಲಿ ಒಬ್ಬರಾದ ಲಿಯೊನಾರ್ಡ್ ಡಾವಿನ್ಸಿಯ ಹುಟ್ಟು ಹಬ್ಬದ ಗೌರವಾರ್ಥವಾಗಿ ಆ ದಿನವನ್ನು ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವ ಕಲಾದಿನ ಎಂದು ಘೋಷಿಸಲಾಯಿತು.

 ವಿಶ್ವ ಕಲಾ ದಿನವನ್ನು ಆಚರಿಸುವ ಉದ್ದೇಶವೇನೆಂದರೆ ಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದ ಜನರಿಗೂ, ಎಲ್ಲಾ ವಯೋಮಾನದವರಿಗೂ, ಸರ್ವಜನಾಂಗದವರಿಗೂ ತಲುಪಿಸುವ ಪ್ರಯತ್ನವಾಗಿದೆ ಎಂದು ಮಾಹಿತಿ ನೀಡಿದರು.

 ಅಲ್ಲದೇ ವಿಶ್ವ ಕಲಾದಿನವನ್ನು ಐಚ್ಚೆಟ್ಟಿರ ಕುಟುಂಬದವರು ಐನ್‌ಮನೆಯಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದು ಕುಟುಂಬದ ಸದಸ್ಯರಿಗೆ ವಿಶ್ವ ಕಲಾದಿನ ಶುಭಾಶಯಗಳನ್ನು ತಿಳಿಸಿ ಬಿಡಿಸಿದ ದೈವಕೊಲದ ಚಿತ್ರವನ್ನು ಐಚೆಟೀರ ಕುಟುಂಬಸ್ಥರಿಗೆ ನೀಡಿದರು. ಈ ಸಂಧರ್ಭ ಐಚೆಟ್ಟಿರ ಕುಟುಂಬದ ಸದಸ್ಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0