ಕೊಡಗು ಪತ್ರಕರ್ತರ ಸಂಘದಲ್ಲಿ ಯುವ ಕಾಫಿ ಉದ್ಯಮಿ ಜಿ.ಮುಕುಲ್ ಮಹೀಂದ್ರ ದತ್ತಿ ನಿಧಿ ಸ್ಥಾಪನೆ
admincoorgdaily
ಮಡಿಕೇರಿ: ಕೊಡಗು ಪತ್ರಕರ್ತರ ಸಂಘದಲ್ಲಿ ಸುಂಟಿಕೊಪ್ಪದ ಯುವ ಕಾಫಿ ಉದ್ಯಮಿ ಜಿ.ಮುಕುಲ್ ಮಹೀಂದ್ರ ಅವರು ತಮ್ಮ ತಂದೆ ಜಿ.ಎಂ.ಮಹೀಂದ್ರ ಅವರ ಹೆಸರಿನಲ್ಲಿ ರೂ.25 ಸಾವಿರ ದತ್ತಿನಿಧಿ ಸ್ಥಾಪಿಸಿದ್ದಾರೆ. ಕುಶಾಲನಗರ ತಾಲ್ಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅವರಿಗೆ ದತ್ತಿನಿಧಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ನಿರ್ದೇಶಕರಾದ ಆಲ್ಫ್ರೆಡ್ ಇದ್ದರು.