ಪ್ರೌಢಶಾಲಾ ಶಿಕ್ಷಕರನ್ನು ಬಿಎಲ್ ಒ ಗಳನ್ನಾಗಿ ನೇಮಕ ಮಾಡುತ್ತಿರುವುದನ್ನು ಕೈಬಿಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ

Jul 18, 2025 - 20:35
 0  141
ಪ್ರೌಢಶಾಲಾ ಶಿಕ್ಷಕರನ್ನು ಬಿಎಲ್ ಒ ಗಳನ್ನಾಗಿ ನೇಮಕ ಮಾಡುತ್ತಿರುವುದನ್ನು ಕೈಬಿಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ

ಮಡಿಕೇರಿ:ಪ್ರೌಢಶಾಲಾ ಶಿಕ್ಷಕರುಗಳನ್ನು ಬಿಎಲ್ ಒ ಗಳನ್ನಾಗಿ ನೇಮಕ ಮಾಡುತ್ತಿರುವುದನ್ನು ಕೈಬಿಡಬೇಕೆಂದು ಕೋರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರೌಢಶಾಲಾ ಸಹಶಿಕ್ಷಕರುಗಳಿಗೆ ಈಗಾಗಲೇ ಪಾಠಪ್ರವಚನಗಳ ಹೆಚ್ಚು ಕಾರ್ಯಭಾರವಿದ್ದು ಇಲಾಖೆಯ ಹತ್ತು ಹಲವು ಕಾರ್ಯಕ್ರಮಗಳ ಅನುಷ್ಠಾನವೂ ಸೇರಿದಂತೆ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಫಲಿತಾಂಶ ತರಬೇಕಾದ ಒತ್ತಡವಿರುವುದರಿಂದ ಬಿ ಎಲ್ ಒ ಕರ್ತವ್ಯ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ. ಆದುದರಿಂದ ಶಿಕ್ಷಣ ಇಲಾಖೆಯ ಕರ್ತವ್ಯವನ್ನು ಹೊರತುಪಡಿಸಿ ಇನ್ನಿತರ ಯಾವುದೇ ಕೆಲಸಗಳನ್ನು ಪ್ರೌಢಶಾಲಾ ಶಿಕ್ಷಕರಿಗೆ ಒತ್ತಾಯಪೂರ್ವಕವಾಗಿ ನೀಡದಂತೆ ಕಂದಾಯ ಇಲಾಖೆ ಮತ್ತು ತಹಶೀಲ್ದಾರ್ ರವರಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್ ಜೆ ಕುಮಾರ್,ಕಾರ್ಯದರ್ಶಿ ಎಂ ಎಸ್ ಮಹೇಂದ್ರ , ಮಡಿಕೇರಿ ತಾಲೂಕು ಅಧ್ಯಕ್ಷ ಪಿ ಎಸ್ ರವಿಕೃಷ್ಣ,ಕಾರ್ಯದರ್ಶಿ ಐರಿನ್ ಉಷಾ,ಶಿಕ್ಷಕಿಯರಾದ ಎಂ ವನಜ ಮತ್ತು ಕೆ ಕೆ ಪುಷ್ಪ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0