ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್: ಅಮಿಟಿ ಯುನೈಟೆಡ್ ಗದ್ದೆಹಳ್ಳ ಚಾಂಪಿಯನ್ ಯುನೈಟೆಡ್ ಎಫ್.ಸಿ ಕುಂಜಿಲ ರನ್ನರ್ಸ್

Apr 28, 2025 - 07:46
 0  54
ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್:  ಅಮಿಟಿ ಯುನೈಟೆಡ್ ಗದ್ದೆಹಳ್ಳ ಚಾಂಪಿಯನ್  ಯುನೈಟೆಡ್ ಎಫ್.ಸಿ ಕುಂಜಿಲ ರನ್ನರ್ಸ್
ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್:  ಅಮಿಟಿ ಯುನೈಟೆಡ್ ಗದ್ದೆಹಳ್ಳ ಚಾಂಪಿಯನ್  ಯುನೈಟೆಡ್ ಎಫ್.ಸಿ ಕುಂಜಿಲ ರನ್ನರ್ಸ್

ಮಡಿಕೇರಿ:ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ಕಳೆದ ಐದು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮಿಟಿ ಯುನೈಟೆಡ್ ಎಫ್.ಸಿ ಗದ್ದೆಹಳ್ಳ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.ರನ್ನರ್ಸ್ ಪ್ರಶಸ್ತಿಗೆ ಯುನೈಟೆಡ್ ಎಫ್.ಸಿ ಕುಂಜಿಲ ತಂಡ ತೃಪ್ತಿಪಟ್ಟುಕೊಂಡಿದೆ.

ಜಿದ್ದಾಜಿದ್ದಿನಿಂದ ‌ಕೂಡಿದ್ದ ಫೈನಲ್ ಹಣಾಹಣಿಯಲ್ಲಿ 20+20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡು ತಂಡಗಳು ಪೈಪೋಟಿ ನಡೆಸಿದರು ಕೂಡ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.ಫೈನಲ್ ಪಂದ್ಯದ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಸಡನ್ ಡತ್ ನಲ್ಲಿ 5-4 ಗೋಲುಗಳ ಅಂತರದಿಂದ ಅಮಿಟಿ ಎಫ್.ಸಿ ತಂಡವು ಗೆದ್ದು ಆರನೇ ವರ್ಷದ ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ಅಮಿಟಿ ಎಫ್.ಸಿ ಗದ್ದೆಹಳ್ಳ ಹಾಗೂ ಕಡಂಗ ಎಫ್.ಸಿ‌ ತಂಡಗಳ ನಡುವೆ ನಡೆಯಿತು.ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದರು.ಅಮಿಟಿ ಗದ್ದೆಹಳ್ಳ ತಂಡದ ಪರವಾಗಿ ಅಫ್ರೀದ್ ಹಾಗೂ ಶಂಸೀರ್ ತಲಾ ಒಂದು ಗೋಲು ಬಾರಿಸಿದರು.

ಕಡಂಗ ತಂಡದ ಪರವಾಗಿ ಅಫ್ಸಲ್ ಗೋಲುಗಳಿಸಿದರು.ಅಮಿಟಿ ತಂಡದ ರಶೀದ್ ಸೆಮಿಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ದ್ವಿತೀಯ ಸೆಮಿಫೈನಲ್ ಪಂದ್ಯವು ಯುನೈಟೆಡ್ ಎಫ್.ಸಿ ಕುಂಜಿ ಹಾಗೂ ಕುಂಜಿಲ ಎಫ್.ಸಿ ತಂಡಗಳ ನಡುವೆ ನಡೆಯಿತು.ಯುನೈಟೆಡ್ ಎಫ್.ಸಿ ಕುಂಜಿಲ ತಂಡವು 3-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.ಸವಾದ್,ಅನೀಸ್,ಸ್ವಲಾಹ್,ಯುನೈಟೆಡ್ ಎಫ್.ಸಿ ಕುಂಜಿಲ ತಂಡದ ಪರವಾಗಿ ಗೋಲು ಬಾರಿಸಿದರು.

ಯುನೈಟೆಡ್ ತಂಡದ ಸವಾದ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳ ನಡುವೆ ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುಂಜಿಲ ಎಫ್.ಸಿ‌ ತಂಡವು 1-0 ಗೋಲುಗಳ ಅಂತರದಿಂದ ಕಡಂಗ ತಂಡವನ್ನು ಮಣಿಸಿ ತೃತೀಯ ಸ್ಥಾನವನ್ನು ಪಡೆದರು.ಕಡಂಗ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಕುಂಜಿಲ ಎಫ್.ಸಿ ತಂಡದ ಪರವಾಗಿ ಸುಲ್ಲಿ ಗೋಲು ದಾಖಲಿಸಿ,ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.

ವೈಯುಕ್ತಿಕ ಬಹುಮಾನಗಳ ವಿವರ:

ಕೊಡಗು ಜಿಲ್ಲಾ ಮಟ್ಟದ ಆರನೇ ವರ್ಷದ ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್ ಪಂದ್ಯಾವಳಿಯಲಗಲಿ ಬೆಸ್ಟ್ ಮುನ್ನಡೆ ಆಟಗಾರ ಉನೈಸ್ ಕಡಂಗ ಎಫ್.ಸಿ, ಬೆಸ್ಟ್ ಮಿಡ್ ಫೀಲ್ಡರ್ ಸಾಬಿತ್ ಯುನೈಟೆಡ್ ಎಫ್.ಸಿ ಕುಂಜಿಲ,ಬೆಸ್ಟ್ ಡಿಫೆಂಡರ್ ಫಯಾಜ್ ಕಡಂಗ ಎಫ್.ಸಿ ,ಬೆಸ್ಟ್ ಗೋಲ್ ಕೀಪರ್ ಅಮಿಟ್ ತಂಡದ ಹಫೀಜ್,ಟಾಪ್ ಸ್ಕೋರರ್ ಸುಹೈಲ್ ಸ್ಟಾರ್ಸ್ ಗೋಣಿಕೊಪ್ಪ, ಉದಯೋನ್ಮುಖ ಗೋಲ್ ಕೀಪರ್ ರಾಯಿಲ್ ಮಾಡ್ರಿಡ್ ಎಫ್.ಸಿ ಕುಂಜಿಲ,ಬೆಸ್ಟ್ ಟೀಮ್ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ, ಸ್ಟೈಲಿಶ್ ಆಟಗಾರ ಅನೀಸ್ ಯುನೈಟೆಡ್ ಎಫ್.ಸಿ ಕುಂಜಿಲ,ಮ್ಯಾನ್ ಆಫ್ ದಿ ಸೀರಿಯಸ್ ಸಾದಿಕ್ ಅಮಿಟಿ ಎಫ್.ಸಿ ,ಬೆಸ್ಟ್ ಹಿರಿಯ ಆಟಗಾರ ಇರ್ಷಾದ್(ಕುಟ್ಟಿ) ಅಮಿಟಿ ಎಫ್.ಸಿಬ,ಉದಯೋನ್ಮುಖ ಆಟಗಾರ ಮನ್ನು ಮ್ಯಾಡ್ರಿಡ್ ಎಫ್ಸಿ ಕೊಂಡಂಗೇರಿ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ರಶೀದ್ ಅಮಿಟಿ ಎಫ್.ಸಿ ಪಡೆದುಕೊಂಡರು.

ಸೌಹಾರ್ದ ಪಂದ್ಯ: ಮಿಲನ್ಸ್ ಎಫ್.ಸಿ ತಂಡಕ್ಕೆ ಗೆಲುವು

ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿಯ ಪ್ರತಿಷ್ಠಿತ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಿತು.ಎರಡು ತಂಡಗಳು 1-1 ಗೋಲುಗಳನ್ನು ದಾಖಲಿಸಿ ಪಂದ್ಯವನ್ನು ಸಮಬಲಗೊಳಿಸಿದರು.ಅಂತಿಮವಾಗಿ ಮಿಲನ್ಸ್ ಎಫ್.ಸಿ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ದಾಖಲಿಸಿ,ಸೌಹಾರ್ದ ಕಪ್ ಪ್ರಶಸ್ತಿ ಪಡೆದರು.ಐದು ದಿನಗಳ ಕಾಲ ನಡೆದ ಪಂದ್ಯದಲ್ಲಿ ತೀರ್ಪುಗಾರರಾಗಿ ಮೈಸೂರಿನ ಕರಣ್ ಅಜೇಶ್,ಅವಿನಾಶ್ ಹಾಗೂ ಅಮ್ಮತ್ತಿಯ ಶೇಷಪ್ಪ ಕಾರ್ಯನಿರ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0