ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ : ಸ್ಟಾರ್ಸ್ ಗೋಣಿಕೊಪ್ಪ ಕ್ವಾಟರ್ ಫೈನಲ್ ಗೆ ಪ್ರವೇಶ

Apr 25, 2025 - 20:31
 0  128
ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ : ಸ್ಟಾರ್ಸ್ ಗೋಣಿಕೊಪ್ಪ ಕ್ವಾಟರ್ ಫೈನಲ್ ಗೆ ಪ್ರವೇಶ
ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ : ಸ್ಟಾರ್ಸ್ ಗೋಣಿಕೊಪ್ಪ ಕ್ವಾಟರ್ ಫೈನಲ್ ಗೆ ಪ್ರವೇಶ

ಮಡಿಕೇರಿ: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿ.ಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸ್ಟಾರ್ಸ್ ಗೋಣಿಕೊಪ್ಪ ತಂಡವು ಶುಕ್ರವಾರ ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಸ್ಟಾರ್ಸ್ ಗೋಣಿಕೊಪ್ಪ ತಂಡವು 4-1 ಗೋಲುಗಳ ಅಂತರದಿಂದ ಬುಲೆಟ್ ಫ್ರೆಂಡ್ಸ್ (ಎ) ಕೊಂಡಂಗೇರಿ ತಂಡವನ್ನು ಮಣಿಸಿ ಕ್ವಾಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಎ ಗುಂಪಿನಲ್ಲಿ ಮೊದಲ ತಂಡವಾಗಿ ಕ್ವಾಟರ್ ಫೈನಲ್ ಪ್ರವೇಶಿಸಿರುವ ಸ್ಟಾರ್ಸ್ ಗೋಣಿಕೊಪ್ಪ ತಂಡವು ನಾಳೆ ನಡೆಯಲಿರುವ ಅಮಿಟಿ ಎಫ್.ಸಿ (ಎ ) ಹಾಗೂ ಹುಂಡಿ ಎಫ್.ಸಿ(ಎ) ತಂಡಗಳ ನಡುವಿನ ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವನ್ನು ಭಾನುವಾರ ನಡೆಯಲಿರುವ ಕ್ವಾಟರ್ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0