ಕೊಡ್ಲಿಪೇಟೆ:7 ಕೋಟಿ ವೆಚ್ಚದ ನೂತನ ವಸತಿ ವಿಜ್ಞಾನ ಪಿಯು ಕಾಲೇಜು ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ.ಮಂತರ್ ಗೌಡ

Jun 18, 2025 - 22:35
 0  12
ಕೊಡ್ಲಿಪೇಟೆ:7 ಕೋಟಿ ವೆಚ್ಚದ ನೂತನ ವಸತಿ ವಿಜ್ಞಾನ ಪಿಯು ಕಾಲೇಜು ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ.ಮಂತರ್ ಗೌಡ

ಕೊಡ್ಲಿಪೇಟೆ : ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಸಮೀಪದ ಕ್ಯಾತೆ ಗ್ರಾಮದಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 7 ಕೋಟಿ ವೆಚ್ಚದ ನೂತನ ವಸತಿ ವಿಜ್ಞಾನ ಪಿಯು ಕಾಲೇಜಿನ ಕಟ್ಟಡ ಕಾಮಗಾರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಚಾಲನೆ ನೀಡಿದ್ದಾರೆ.

ಈ ಸಂದರ್ಭದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಶಾಸಕ ಡಾ.ಮಂತರ್ ಗೌಡ, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸರಕಾರ ವಸತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ.ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು.ಕೊಡಗಿನಲ್ಲಿ ಬೇರೆ ಜಿಲ್ಲೆಗಳಿಗಿಂತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಕಾಲೇಜು ಪ್ರಾರಂಭದಿಂದ ಇಲ್ಲಿಯೇ 6ರಿಂದ ದ್ವಿತೀಯ ಪಿಯು ವರೆಗೂ ವಿದ್ಯಾಭ್ಯಾಸ ಮಾಡಲು ಅವಕಾಶ ದೊರದಂತಾಗಿದೆ.ಅಬ್ದುಲ್ ಕಲಾಂ ರಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿರುವ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರ ಹೆಸರು ಶಾಶ್ವತವಾಗಿ ಇರುವಂತೆ ಉತ್ತಮವಾಗಿ ಓದಿ ಗೌರವ ತರುವಂತಹ ರೀತಿಯಲ್ಲಿ ಬೆಳೆಯಬೇಕೆಂದ ಶಾಸಕರು, ಕಲಾಂರವರಂತಹ ಆದರ್ಶ ಪುರುಷರನ್ನು ಅನುಸರಿಸಬೇಕೆಂದು ಕಿವಿ‌ ಮಾತು ಹೇಳಿದರು.ಕರ್ನಾಟಕ ವಸತಿ ಮಂಡಳಿಯು ಈ ಕಾಮಾಗಾರಿಯನ್ನು ನಿರ್ವಹಿಸುತ್ತಿದ್ದು ಗುತ್ತಿಗೆದಾರರು ಯೋಜನೆ ಮತ್ತು ಅಂದಾಜು ಪಟ್ಟಿಯಂತೆ ಉತ್ತಮವಾಗಿ ಕಾಮಾಗಾರಿ ನಿರ್ವಹಿಸಬೇಕು.ಇಲ್ಲಿಯ ಪ್ರಾಂಶುಪಾಲರು ,ಸಿಬ್ಬಂದಿವರ್ಗ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಮಹೇಶ್ ,ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್ , ತಾಲೂಕು ಕೆ.ಡಿ.ಪಿ‌ ಸದಸ್ಯರಾದ ಔರಂಗಜೇಬ್ ,ವೇದಕುಮಾರ್ ,ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ,ಪಾವನ ,ದೊಡ್ಡಯ್ಯ ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೊಕೇಶ್ , ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್ ,ವಸತಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬ್ರಮಲಾ ,ಕಿರಿಯ ಅಭಿಯಂತರ ಅಶ್ವಿನ್ , ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೆಶಕರಾದ ತೇಜಕುಮಾರ್ ,ವಹಾಬ್ ,ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್,ಸ್ಥಳೀಯ ಮುಖಂಡರಾದ ಸಾಬುಜಾನ್, ಮೇದಪ್ಪ, ಗಣೇಶ್ ,ವೆಂಕಟೇಶ್ ,ರಫೀಕ್ ,ಇಂದ್ರೇಶ್ ,ನಿಖಿಲ್ ಮುಂತಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0