ಮಡಿಕೇರಿ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

Jun 21, 2025 - 17:59
 0  86
ಮಡಿಕೇರಿ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

ಮಡಿಕೇರಿ:ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿ ನಗರ ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ ಪಕ್ಷದ ಜಿಲ್ಲಾ ಕಚೇರಿ ಆವರಣದಲ್ಲಿ ಆಚರಿಸಲಾಯಿತು.ಎಸ್.ಡಿ.ಪಿ.ಐ ಅಪರ ಜಿಲ್ಲಾಧ್ಯಕ್ಷರಾದ ಮನ್ಸೂರ್ ಅಲಿ ಮತ್ತು ನಗರಾಧ್ಯಕ್ಷರಾದ ರಿಜ್ವಾನ್ ಅಹಮ್ಮದ್ ಜಂಟಿಯಾಗಿ ದ್ವಜಾರೋಹಣ ನೆರವೇರಿಸಿದರು. ಪ್ರಾಸ್ಥಾವಿಕವಾಗಿ ಮಡಿಕೇರಿ ನಗರಾಧ್ಯಕ್ಷರು ಮಾತನಾಡಿದರು.ಅಪರ ಜಿಲ್ಲಾಧ್ಯಕ್ಷರಾದ ಮನ್ಸೂರ್ ಅಲಿಯವರು ಸಂದೇಶ ಭಾಷಣ ಮಾಡಿದರು.ಜಿಲ್ಲಾ ಕಾರ್ಯದರ್ಶಿ ಬಷೀರ್ ಅಹಮದ್ ರವರು ದಿನದ ಮಹತ್ವವನ್ನು ವಿವರಿಸಿ ಮಾತನಾಡಿದರು.

ನಗರ ಸಹ ಕಾರ್ಯದರ್ಶಿ ಇಬ್ರಾಹಿಂ ಸ್ವಾಗತ ಕೋರಿ ನಗರ ಕಾರ್ಯಧರ್ಶಿ ಉಬೈದ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಜಲೀಲ್ ಅಹ್ಮದ್, ಜಿಲ್ಲಾ ನಾಯಕರು, ನಗರ ಸಮಿತಿ ಪಧಾಧಿಕಾರಿಗಳು ಬ್ರಾಂಚ್ ಪಧಾಧಿಕಾರಿಗಳು ವಿಮೆನ್ ಇಂಡಿಯಾ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0