ಅಂಬಟ್ಟಿ ತಂವೀರುಲ್ ಇಸ್ಲಾಂ ಮದರಸದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ,
ವಿರಾಜಪೇಟೆ: ಸಮೀಪದ ಅಂಬಟ್ಟಿ ತಂವೀರುಲ್ ಇಸ್ಲಾಂ ಮದ್ರಸದಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಅಂಬಟ್ಟಿ ಮಖಾಂ ಜುಮಾ ಮಸೀದಿಯ ಅಧ್ಯಕ್ಷರಾದ ಶಾದುಲಿ ಎ.ಹೆಚ್. ಅವರು ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಭಾಷಣವನ್ನು ಮದ್ರಸ ಅಧ್ಯಾಪಕರಾದ ಸಲಾಂ ಮಾಡಿದರು. ಖತೀಬರಾದ ರಫೀಕ್ ಸಹದಿ ಉಸ್ತಾದ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ತ್ಯಾಗ–ಬಲಿದಾನಗಳೊಂದಿಗೆ ಭಾರತದ ವೈವಿಧ್ಯತೆಯಲ್ಲಿರುವ ಏಕತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಹ ಕಾರ್ಯದರ್ಶಿ ಅಶಿಕ್ ಶರೀಫ್, ಮದ್ರಸಾ ಅಧ್ಯಾಪಕರಾದ ರಫೀಕ್ ಮುಸ್ಲಿಯಾರ್, ಆಡಳಿತ ಮಂಡಳಿಯ ಖಜಾಂಚಿ ಖಾಲಿದ್ ಫೈಝಿ, ಕಾರ್ಯದರ್ಶಿ ಶಾನು,ಆಡಳಿತ ಮಂಡಳಿಯ ಸದಸ್ಯರು, ಊರಿನ ಹಿರಿಯರು ಹಾಗೂ ಪೋಷಕರು ಹಾಜರಿದ್ದರು.