ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾ ಮಿಲನಕ್ಕೆ ವರ್ಣರಂಜಿತ ತೆರೆ; ಕ್ರಿಕೆಟ್ ನಲ್ಲಿ ಕೋಟೆಕೊಪ್ಪ ಚಾಂಪಿಯನ್, ಹಗ್ಗ ಜಗ್ಗಾಟದಲ್ಲಿ ಹಾತೂರು, ಕೋಟೆಕೊಪ್ಪ, ಥ್ರೋ ಬಾಲ್, ಮಕ್ಕಳ ಕ್ರಿಕೆಟ್ ನಲ್ಲಿ ಹಾತೂರು ವಿನ್ನರ್ಸ್

May 18, 2026 - 10:37
 0  210
ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾ ಮಿಲನಕ್ಕೆ ವರ್ಣರಂಜಿತ ತೆರೆ; ಕ್ರಿಕೆಟ್ ನಲ್ಲಿ ಕೋಟೆಕೊಪ್ಪ ಚಾಂಪಿಯನ್,  ಹಗ್ಗ ಜಗ್ಗಾಟದಲ್ಲಿ ಹಾತೂರು, ಕೋಟೆಕೊಪ್ಪ,  ಥ್ರೋ ಬಾಲ್, ಮಕ್ಕಳ ಕ್ರಿಕೆಟ್ ನಲ್ಲಿ  ಹಾತೂರು ವಿನ್ನರ್ಸ್

ಪೊನ್ನಂಪೇಟೆ, ಏ. 7 : ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ 3 ದಿನಗಳ ವರೆಗೆ ನಡೆದ ಒಕ್ಕಲಿಗರ ಮಿಲನ, ಒಕ್ಕಲಿಗರ ಕ್ರೀಡಾಕೂಟದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಬಾಂಧವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವ ಮೂಲಕ ಕ್ರೀಡಾ ಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ಕ್ರಿಕೆಟ್ ಲೀಗ್ ಕೋಟೆಕೊಪ್ಪ ಚಾಂಪಿಯನ್ : ಕೋಟೆಕೊಪ್ಪ ವಾರಿಯರ್ಸ್ ಮತ್ತು ಕಣ್ಣಂಗಾಲ ಎ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಣ್ಣಂಗಾಲ ಎ ತಂಡ ನಿಗದಿತ 4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿತು. ಗೆಲ್ಲಲು 55 ರನ್ ಗಳ ಗುರಿ ಬೆನ್ನಟ್ಟಿದ ಕೋಟೆಕೊಪ್ಪ ತಂಡ, 3.5 ಓವರ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಹೋರಾಟ ನೀಡಿದ ಕಣ್ಣಂಗಾಲ ಎ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ವಿನಾಯಕ ಸ್ಟ್ರೈಕರ್ಸ್ ಮೂರನೇ ಸ್ಥಾನ ಪಡೆದು ಕೊಂಡಿತು. ಮಕ್ಕಳ ಕ್ರಿಕೆಟ್ ಪಂದ್ಯದಲ್ಲಿ ಹಾತೂರು ತಂಡ ಕೋಟೆಕೊಪ್ಪ ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಟ್ರೋಫಿ ಪಡೆದು ಕೊಂಡರೆ, ಕೋಟೆಕೊಪ್ಪ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ವೈಯಕ್ತಿಕ ಪ್ರಶಸ್ತಿ: ಮ್ಯಾನ್ ಆಫ್ ದಿ ಸೀರೀಸ್ ಆಗಿ ಕಣ್ಣಂಗಾಲ ತಂಡದ ಪ್ರಮೋದ್ ಗೌಡ, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಕೋಟೆಕೊಪ್ಪ ತಂಡದ ಶಭರೀಶ್ ಪಿಂಕು, ಬೆಸ್ಟ್ ಬೌಲರ್ ಆಗಿ ಕೈಕೇರಿ ತಂಡದ ಚೇತನ್ ಗೌಡ, ಬೆಸ್ಟ್ ಫೀಲ್ಡರ್ ಭರತ್ ಕೋಟೆಕೊಪ್ಪ, , ಬೆಸ್ಟ್ ವಿಕೆಟ್ ಕೀಪರ್ ಭವಿನ್ ಹಾತೂರು, ಬೆಸ್ಟ್ ಕ್ಯಾಚ್ ಸುದೀಪ್ ಹಾತೂರು, ಬೆಸ್ಟ್ ಆಲ್ ರೌಂಡರ್ ಆಗಿ ವಿನಾಯಕ ಸ್ಟ್ರೈಕರ್ಸ್ ನ ಪ್ರಶಾಂತ್, ಎಮರ್ಜಿಂಗ್ ಪ್ಲೇಯರ್ ಆಗಿ ಹಾತೂರು ತಂಡದ ಪ್ರಥಮ್, ಬೆಸ್ಟ್ ಟೀಮ್ ಪ್ರಶಸ್ತಿಯನ್ನು ಬಾಳೆಲೆ ನಮೋ ಕ್ರಿಕೆಟರ್ಸ್ ತಂಡ ಪಡೆದು ಕೊಂಡಿತು. ತೀರ್ಪುಗಾರರಾಗಿ ದೈಹಿಕ ಶಿಕ್ಷಕ ಮಹೇಶ್, ಹರೀಶ್ ಮಸ್ಕಲ್, ಶ್ಯಾಮ್, ದರ್ಶನ್ ವಿರಾಜಪೇಟೆ ಕಾರ್ಯನಿರ್ವಹಿಸಿದರು.

ಹಗ್ಗ ಜಗ್ಗಾಟ, ಥ್ರೋ ಬಾಲ್: ಉತ್ತಮ ಪೈಪೋಟಿಯಿಂದ ಕೂಡಿದ್ದ, ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಕೋಟೆಕೊಪ್ಪ ಪ್ರಥಮ, ಹಾತೂರು ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಹಾತೂರು ತಂಡ ಪ್ರಥಮ, ಕೋತೂರು ಮಾರಮ್ಮ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಥ್ರೋ ಬಾಲ್ ನಲ್ಲಿ ಹಾತೂರು ಪ್ರಥಮ, ಕುಟ್ಟ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಆಟೋಟ ಸ್ಪರ್ಧೆ ವಿಜೇತರು: ಭಾರದ ಗುಂಡು ಎಸೆತ ಸ್ಪರ್ಧೆ ಪುರುಷರ ವಿಭಾಗದಲ್ಲಿ ವಿ.ಎನ್. ಮಹೇಶ್ ಪ್ರಥಮ, ವಿ.ಜಿ. ಮಂಜು ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೇಷ್ಮ ಪ್ರಥಮ, ಶ್ವೇತಾ ದೀಪಕ್ ದ್ವಿತೀಯ, ಓಟದ ಸ್ಪರ್ಧೆ12 ರಿಂದ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೃತಿಕ್ ಪ್ರಥಮ, ಲೋಚನ್ ದ್ವಿತೀಯ, ನಿಶ್ಚಲ್ ತೃತೀಯ, ಬಾಲಕಿಯರಲ್ಲಿ ಚಂದನ ಪ್ರಥಮ, ವಿತ ದ್ವಿತೀಯ, ದೀಕ್ಷಾ ತೃತೀಯ, 14 ರಿಂದ 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತನ್ವಿಷ್ ಪ್ರಥಮ, ದಿಗಂತ್ ದ್ವಿತೀಯ, ಪ್ರಥಮ್ ತೃತೀಯ, ಬಾಲಕಿಯರ ವಿಭಾಗದಲ್ಲಿ ತ್ರಿಷ ಪ್ರಥಮ, ಪರಿಣಿತ ದ್ವಿತೀಯ, ವೈಭವಿ ತೃತೀಯ ಬಹುಮಾನ ಪಡೆದುಕೊಂಡರು. ಮೂರು ಕಾಲಿನ ಓಟ ಪುರುಷರ ವಿಭಾಗದಲ್ಲಿ ರಚನ್, ಸುಮನ್ ಪ್ರಥಮ, ಕಿರಣ್, ಕುಮಾರ್ ದ್ವಿತೀಯ, ಮಂಜು, ನಾಗರಾಜ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಮೈನಾ, ಅಂಜನಾ ಪ್ರಥಮ, ಸಹನಾ, ಪಲ್ಲವಿ ದ್ವಿತೀಯ, ದೀಪಿಕಾ, ಲೇಖ ತೃತೀಯ, ಗೋಣಿಚೀಲ ಜಿಗಿತ ಬಾಲಕರ ವಿಭಾಗದಲ್ಲಿ ಹಿತೇಶ್ ಪ್ರಥಮ, ಶಿಷ್ಠಿ ದ್ವಿತೀಯ, ಕವಿನ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಪುಣ್ಯಶ್ರೀ ಪ್ರಥಮ, ತನುಶ್ರೀ ದ್ವಿತೀಯ, ಆವಾನಿ ತೃತೀಯ, ಗೋಲಿ ಹೆಕ್ಕುವ ಸ್ಪರ್ಧೆಯಲ್ಲಿ ಮಾನ್ವಿತ ಪ್ರಥಮ, ಧಯಾನಿಕ ದ್ವಿತೀಯ, ಪೃಥ್ವಿ ತೃತೀಯ, ಫ್ಯಾನ್ಸಿ ಡ್ರೆಸ್ ನಲ್ಲಿ ಜಶ್ವಂತ್ ಗೌಡ ಪ್ರಥಮ, ನಿಶ್ಚಿಕಾ ದ್ವಿತೀಯ, ತನಿಷ್ಕಾ ತೃತೀಯ, ಬಕೆಟ್ ಗೆ ಬಾಲ್ ಹಾಕುವ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಭೂಷಿತ್ ಪ್ರಥಮ, ಸಮರ್ಥ್ ದ್ವಿತೀಯ, ಜಯಶ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಅನ್ಸಿನಿ ಪ್ರಥಮ, ಪರೀಕ್ಷಾ ದ್ವಿತೀಯ ಬಹುಮಾನ ಪಡೆದುಕೊಂಡರು. ರಂಗೋಲಿ ಸ್ಪರ್ಧೆಯಲ್ಲಿ ಚಂದ್ರಿಕ ಪ್ರಥಮ, ಸ್ಮಿತಾ ದ್ವಿತೀಯ, ಸಂಧ್ಯಾ ತೃತೀಯ ಸ್ಥಾನ, ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಸೌಮ್ಯ ಜೀವನ್ ಪ್ರಥಮ, ದರ್ಶಿನಿ ದ್ವಿತೀಯ ಸ್ಥಾನ ಪಡೆದುಕೊಂಡರು. ಇದೇ ಸಂದರ್ಭ ಕ್ರೀಡೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಕ್ಕಲಿಗ ಜನಾಂಗದ ಮಕ್ಕಳನ್ನು ಸನ್ಮಾನಿಸಲಾಯಿತು.

 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು.

ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಚಲನ ಚಿತ್ರ ನಿರ್ಮಾಪಕ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸ ಗೌಡ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಾಜಿ ಹಾಕಿ ತರಬೇತುದಾರ ವಿ. ಎಸ್. ರಾಮಚಂದ್ರ, ವಕೀಲರಾದ ವಿ. ಜಿ. ರಾಕೇಶ್, ಒಕ್ಕಲಿಗರ ಯುವ ವೇದಿಕೆ ಮಾಜಿ ಕಾರ್ಯದರ್ಶಿ ಮಂಜುನಾಥ್ ಎನ್, ದಾನಿಗಳಾದ ಕೆ. ಆರ್. ಸತೀಶ್, ಎನ್. ಎಸ್. ಬಸವರಾಜು, ರಚನ್ ವಿ. ಎಸ್, ವಿ. ಬಿ. ದೊರೆಸ್ವಾಮಿ, ವಿ. ಎಲ್. ಆನಂದ್, ಅನಿಲ್ ಕುಮಾರ್ ಹೆಚ್. ಜಿ, ಡಿ. ಜಿ. ಭವಿನ್, ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆ ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ಲವ, ಗೌರವ ಅಧ್ಯಕ್ಷ ಡಾಲು, ಖಜಾಂಚಿ ಕಿರಣ್, ಕ್ರೀಡಾ ಸಂಚಾಲಕರಾದ ನಿಖಿಲ್, ಜಗದೀಶ್, ಸಹ ಕಾರ್ಯದರ್ಶಿ ಮನು, ನಿರ್ದೇಶಕರು, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಒಕ್ಕಲಿಗ ಭಾಂದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0