ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ಶಿಕ್ಷಕರಿಗೆ ಸಂಕಷ್ಟ: ಬಿಸಿಲು,ಮಳೆಎನ್ನದೇ ದುಡಿದವರಿಗೆ ನೋಟಿಸ್
ಮಡಿಕೇರಿ: ಸೋಮವಾರಪೇಟೆ,ಕುಶಾಲನಗರ ತಾಲೂಕಿನ 275 ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಖಚೇರಿ ಮುಂದ ಎ ಶಿಕ್ಷಕರ ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಮನೆಗಳಿಗೂ ಯು. ಹೆಚ್.ಐ.ಡಿ ಕೋಡ್ ಅಳವಡಿಸಲಾಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಮನೆ ಹುಡುಕುವುದೇ ಸವಾಲಾಗಿದೆ ನೋಟಿಸ್ ಹಿಂಪಡೆಯಲು ಆಗ್ರಹಿಸಿದ್ದಾರೆ.
ಸಮೀಕ್ಷೆ ಅವಧಿ ಹತ್ತು ದಿನ ಮುಂದುವರೆಸಲು ಒತ್ತಾಯ ಮಾಡಿದ್ದು, ಸಮೀಕ್ಷೆ ಮುಗಿದನಂತರ ಶಿಕ್ಷಕರಿಗೆ ಒಂದುವಾರ ರಜೆಯ ಬೇಡಿಕೆ ಇಟ್ಟಿದ್ದಾರೆ. ಆಡಳಿತಾತ್ಮಕ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿದ್ದು, ಶಿಕ್ಷರ ಮೇಲೆ ಅನ್ಯ ಇಲಾಖೆ ದಬ್ಬಾಳಿಕೆ ಶಿಕ್ಷಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣತಿದಾರರಿಗೆ ನೋಟಿಸ್ ನೀಡಿರುವುದನ್ನು ರದ್ದುಪಡಿಸಲು ಶಿಕ್ಷಕರ ಮನವಿ:
ಗಣತಿ ಕಾರ್ಯ ಪೂರೈಸಿರುವ ಮತ್ತು ಶೇಕಡಾ 80-90% ರಷ್ಟು ಗಣತಿ ಮುಗಿಸಿರುವ ಗಣತಿದಾರ ಶಿಕ್ಷಕರಿಗೆ ವಿನಾಃ ಕಾರಣ ನೋಟಿಸ್ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಈ ದಿನ ( ಸೋಮವಾರ ) ಬೆಳಿಗ್ಗೆ 10.30 ಕ್ಕೆ ಸೋಮವಾರಪೇಟೆಯಲ್ಲಿ ಬಿಇಓ ಕಛೇರಿ ಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಭೇಟಿ ನೀಡಿ ಮನವಿ ಸಲ್ಲಿಸಲಿದ್ದಾರೆ.
ದಸರಾ ರಜೆಯಲ್ಲಿ ಬಿಸಿಲು- ಮಳೆ ಎನ್ನದೇ ಬೆಳಿಗ್ಗೆ 7.00 ರಿಂದ ರಾತ್ರಿ 9.00 ರ ವರೆಗೂ ಮನೆ ಮನೆ ಅಲೆದು ಸಮೀಕ್ಷೆ ನಡೆಸಿದರೂ ಮನೆಗಳು ಸಿಗದಿರುವುದರಿಂದ ( UHID ನಂಬರ್ ಗಳ ದೋಷ) ಸಮೀಕ್ಷಾ ಕಾರ್ಯ ಕುಂಠಿತ ಎಂಬ ನೆಪವೊಡ್ಡಿ ಮೇಲಾಧಿಕಾರಿಗಳ ಒತ್ತಡದಿಂದ ಶಿಕ್ಷಕರಿಗೆ ನೀಡಿರುವ ನೋಟಿಸ್ ನಿಂದ ಶಿಕ್ಷಕರು ಮಾನಸಿಕವಾಗಿ ಕುಗ್ಗಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಗಣತಿದಾರ ಶಿಕ್ಷಕರು ಬಿಇಓ ಮುಂದೆ ಅಳಲು ತೋಡಿಕೊಂಡಿದ್ದಾರೆ. ಸಮೀಕ್ಷೆಯನ್ನು ತಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರ ನೆರವಿನಿಂದ ಈಗಾಗಲೇ ಶೇಕಡಾ 75-85% ಪೂರ್ಣಗೊಳಿಸಿದ್ದರೂ ನೋಟಿಸ್ ನೀಡಿರುವುದು ತಮಗೆ ತುಂಬಾ ನೋವು ತಂದಿದೆ ಎಂದು ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.