Kodagu

ಕರಾಟೆ ಚಾಂಪಿಯನ್ ಶಿಪ್ ನಲ್ಲಿ, ಅಮ್ಮತಿಯ ಶಿಟೋರಿಯೊ ಕರಾಟೆ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

admincoorgdaily

ಸಿದ್ದಾಪುರ:- ಮೈಸೂರು ಚಾಮುಂಡಿ ವಿಹಾರ್ ಒಳಾoಗಣ ಕ್ರೀಡಾಂಗಣದಲ್ಲಿ ಕೊಡಗಿನ ಕಿಯೋಷಿ ಅರುಣ್ ಮಾಚಯ್ಯರವರ ನೇತೃತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಶಿಟೋರಿಯೊ ಕರಾಟೆ ಚಾಂಪಿಯನ್ ಶಿಪ್ ನಲ್ಲಿ, ಅಮ್ಮತಿಯ ಶಿಟೋರಿಯೊ ಸ್ಕೂಲ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ತರಬೇತಿದಾರರಾದ ಪ್ರಸನ್ನರವರ ಮಾರ್ಗದರ್ಶನದಲ್ಲಿ 19 ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಭಾಗವಹಿಸಿ ಕತಾ ಹಾಗೂ ಕುಮಿತೇ ವಿಭಾಗದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮ ದಾಗಿಸಿಕೊಂಡರು. ಕುಮಿತೇ ವಿಭಾಗದಲ್ಲಿ ಅಚ್ಚಯ್ಯ ಚಿನ್ನ ಅನ್ವಿತಾ ಕಾರ್ತಿಕ್ ಬೆಳ್ಳಿ, ಭವ್ಯಾ, ಕಾರ್ಯಪ್ಪ ಹಾಗೂ ಅನುದೇವ್ ಕಂಚಿನ ಪದಕ ಪಡೆದುಕೊಂಡರು.

 ಕತಾ ವಿಭಾಗದಲ್ಲಿ ಅನನ್ಯ ಸುಬೀಶ್ ಮತ್ತು ಮುತಣ್ಣ ಚಿನ್ನ, ಕಾವೇರಮ್ಮ ಅನ್ವಿತಾ , ಕಾರ್ತಿಕ್ ಕಾರ್ಯಪ್ಪ ಹಾಗೂ ಲಿಯೋನ್ ಬೆಳ್ಳಿ ಎಬೆನ್ ಜಾನ್ಫ್ರೆಡ್ ಕಂಚಿನ ಪದಕ ಪಡೆದರು. ಟೀಮ್ ಕತಾ ವಿಭಾಗದಲ್ಲಿ, ಅಚ್ಚಯ್ಯ, ದೈವಿಕ್ ಲಾಲ್, ಮುತಪ್ಪ, ಸಾತಿವಿಕ್, ರೋಹನ್ ಗೌಡ, ಅಕ್ಷಿತ್, ದಿಯಾ ಸುನಿಲ್, ಕಯಾಲ್, ಹಾಗೂ ದೇಚಮ್ಮ ಕಂಚಿನ ಪದಕ ಗಳಿಸಿದುರು. ಪದಕ ಗಳಿಸಿದ ಎಲ್ಲಾ ಕರಾಟೆ ಪಟುಗಳು ಅಂತರಾಷ್ಟ್ರೀಯ ಮಟ್ಟದ ಕರಟೆ ಚಾಂಪಿಯನ್ಶಿಪಿಗೆ ಆಯ್ಕೆಯಾಗಿದ್ದಾರೆ.