Kodagu

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನು ಕಾರ್ಯಪ್ಪ ಅವಿರೋಧ ಆಯ್ಕೆ

admincoorgdaily

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಿಪಬ್ಲಿಕ್ ಕನ್ನಡ ಚಾನಲ್ ಜಿಲ್ಲಾ ವರದಿಗಾರರಾದ ಬಾಚರಣಿಯಂಡ ಅನುಕಾರ್ಯಪ್ಪ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜೆ.ರಾಕೇಶ್,ಉಪಾಧ್ಯಕ್ಷರಾಗಿ ನವೀನ್ ಸುವರ್ಣ,ವನಿತಾ ಚಂದ್ರಮೋಹನ್,ಎ.ಎನ್.ವಾಸು ,ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ, ರಿಜ್ವಾನ್ ಹುಸೇನ್,ಚೆರಿಯಮನೆ ಸುರೇಶ್ ಆಯ್ಕೆಯಾಗಿದ್ದಾರೆ. ರಾಜ್ಯ‌ ಸಂಘದ ನಿರ್ದೇಶಕರಾಗಿ ಬಿ.ಆರ್.ಸವಿತಾ ರೈ ಆಯ್ಕೆಯಾಗಿದ್ದಾರೆ.ಉಳಿದಂತೆ 15 ನಿರ್ದೇಶಕರ ಸ್ಥಾನಕ್ಕೆ ನವೆಂಬರ್ 9 ರಂದು ಚುನಾವಣೆ ನಡೆಯಲ್ಲಿದೆ.