ಸೋಮವಾರಪೇಟೆ ತಾಲ್ಲೂಕು ಬಂದ್‌ಗೆ ಬಿಜೆಪಿ ಕೃಷಿಮೋರ್ಚಾ ಹಾಗೂ ಮಂಡಲ ಬಿಜೆಪಿಯಿಂದ ಸಂಪೂರ್ಣ ಬೆಂಬಲ:ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶರತ್‌ಚಂದ್ರ

ಸೋಮವಾರಪೇಟೆ ತಾಲ್ಲೂಕು ಬಂದ್‌ಗೆ ಬಿಜೆಪಿ ಕೃಷಿಮೋರ್ಚಾ ಹಾಗೂ  ಮಂಡಲ ಬಿಜೆಪಿಯಿಂದ ಸಂಪೂರ್ಣ ಬೆಂಬಲ:ಬಿಜೆಪಿ  ಕೃಷಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶರತ್‌ಚಂದ್ರ

ಸೋಮವಾರಪೇಟೆ: ಸಿ ಆ್ಯಂಡ್ ಡಿ ಕೃಷಿ ಭೂಮಿ ಹಕ್ಕಿಗಾಗಿ ರೈತ ಹೋರಾಟ ಸಮಿತಿಯವರು ಆ. 12ರಂದು ಕರೆಕೊಟ್ಟಿರುವ ಸೋಮವಾರಪೇಟೆ ತಾಲ್ಲೂಕು ಬಂದ್‌ಗೆ ಬಿಜೆಪಿ ಕೃಷಿಮೋರ್ಚಾ ಹಾಗು ಮಂಡಲ ಬಿಜೆಪಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಕೃಷಿಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶರತ್‌ಚಂದ್ರ ಹೇಳಿದರು. ಬಿಜೆಪಿ ಶಕ್ತಿ ಕೇಂದ್ರ, ಕೃಷಿ ಮೋರ್ಚಾದ ಸದಸ್ಯರುಗಳು ಬಂದ್ ಹಾಗು ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಲಿದ್ದಾರೆ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ರೈತವಿರೋಧಿ ಕಾನೂನುಗಳನ್ನು ತರುವ ಮೂಲಕ ರೈತವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ೧೭.೫.೨೦೨೪ರಂದು ಸಿ ಆ್ಯಂಡ್ ಡಿ ಸೆಕ್ಷನ್-೪ ಸರ್ವೆಗೆ ರಾಜ್ಯ ಸರ್ಕಾರವೇ ಅರಣ್ಯ ವ್ಯವಸ್ಥಾಪನ ಅಧಿಕಾರಿಯನ್ನು ನೇಮಿಸಿದೆ. ಆ ಅಧಿಕಾರಿಯೇ ಈಗ ಆಸ್ತಿ ಸರ್ವೆಗೆ ರೈತರಿಗೆ ನೋಟಿಸ್ ಜಾರಿಗೊಳಿಸಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು. ೧೦.೧.೨೦೨೪ರಂದು ಮನೆಗಳಲ್ಲಿರುವ ವನ್ಯಜೀವಿಯ ಚರ್ಮ, ಕೊಂಬುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂಬ ಕಾನೂನನ್ನು ಜಾರಿಗೆ ತಂದಿದೆ. ೨೩.೧.೨೦೨೪ರಲ್ಲಿ ಖಾಸಗಿ ಜಮೀನಲ್ಲಿರುವ ಮರಗಳನ್ನು ಕಂದಾಯ ಇಲಾಖೆಗೆ ಒಪ್ಪಿಸಬೇಕು ಎಂಬ ಕಾನೂನು, ಇತೀಚೆಗೆ ಮೀಸಲು ಅರಣ್ಯಕ್ಕೆ ಹಸುಗಳನ್ನು ಬಿಟ್ಟರೆ ಕಾನೂನು ಕ್ರಮ ಜರುಗಿಸುವ ಕ್ರಮಗಳಿಂದ ರೈತ ವಿರೋಧಿ ಸರ್ಕಾರ ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಎಸ್.ಆರ್.ಸೋಮೇಶ್, ಪ್ರಮುಖರಾದ ಭಾನುಪ್ರಕಾಶ್, ರವಿ, ಕಿಬ್ಬೆಟ್ಟ ಮಧು ಇದ್ದರು.