ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ : ಮಹಿಳೆಯರ ಕ್ವಾರ್ಟರ್ ಫೈನಲ್ಸ್ : ಗೆಲುವು ಸಾಧಿಸಿದ ತಂಡಗಳು

Apr 26, 2026 - 18:18
 0  163
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ : ಮಹಿಳೆಯರ ಕ್ವಾರ್ಟರ್ ಫೈನಲ್ಸ್ : ಗೆಲುವು ಸಾಧಿಸಿದ ತಂಡಗಳು

ಮಡಿಕೇರಿ ಏ.26 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು

ಮೈದಾನ 1 (ಲಾಲು ಮುದ್ದಯ್ಯ ಮೈದಾನ)*l

ಮಾಳೇಟಿರ (ಕೆದಮುಳ್ಳೂರು) ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ 38 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 97 ರನ್ ಗಳನ್ನು ಸೇರಿಸಿತು. ಕರಿನೆರವಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 59 ರನ್ ಗಳನ್ನು ಗಳಿಸಿ ಸೋಲು ಕಂಡಿತು.

ಮಾಳೇಟಿರ ಪರ ನವೀನ್ ಹಾಗೂ ಅನ್ಶುಲ್ ತಲಾ 2 ವಿಕೆಟ್ ಪಡೆದರು. ರಾಣೆ 50 ರನ್ ಗಳನ್ನು ಗಳಿಸಿದರು. ಕರಿನೆರವಂಡ ಪರ 2 ವಿಕೆಟ್ ಪಡೆದು 14 ರನ್ ಗಳನ್ನು ಸೇರಿಸಿದ ಗಗನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.  

ಅಳಮೇಂಗಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡಕ್ಕೆ 10 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುದಿಯೊಕ್ಕಡ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಗಳಿಸಿತು. ಅಳಮೇಂಗಡ ಯಾವುದೇ ವಿಕೆಟ್ ನಷ್ಟವಿಲ್ಲದೆ 3.1 ಓವರ್ ಗಳಲ್ಲಿ 42 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು.

ಅಳಮೇಂಗಡ ಸೋಮಯ್ಯ 26 ರನ್ ಗಳನ್ನು ಗಳಿಸಿದರು. ಪುದಿಯೊಕ್ಕಡ ನಿರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.  

ಪಾರುವಂಡ ಮತ್ತು ಮುಕ್ಕಾಟಿರ (ಬೆಳ್ಳೂರು - ಹರಿಹರ) ನಡುವಿನ ಪಂದ್ಯದಲ್ಲಿ ಪಾರುವಂಡ ತಂಡ 7 ವಿಕೆಟ್ ಗಳಿಂದ ಗೆಲುವು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಸೇರಿಸಿತು. ಪಾರುವಂಡ 5.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.

ಪಾರುವಂಡ ಪರ ಪ್ರಿನ್ಸ್ ಹಾಗೂ ಹೇಮಂತ್ ತಲಾ 2 ವಿಕೆಟ್ ಪಡೆದರು. ಮಿಥುನ್ 35 ರನ್ ಗಳನ್ನು ಸೇರಿಸಿದರು. ಮುಕ್ಕಾಟಿರ ಪರ ಲಕ್ಷö್ಯನ್ 2 ವಿಕೆಟ್ ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನೆರವಂಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ ನೆರವಂಡ ತಂಡಕ್ಕೆ 18 ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 59 ರನ್ ಗಳನ್ನು ಸೇರಿಸಿತು. ಕೊಟ್ಟಂಗಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ನೆರವoಡ ಪರ ಸಂಪನ್ 18 ರನ್ ಗಳನ್ನು ಪಡೆದರು. ಅರುಣ್, ವರುಣ್ ಹಾಗೂ ಬೋಪಣ್ಣ ತಲಾ 1 ವಿಕೆಟ್ ಕಬಳಿಸಿದರು.

ಕೊಟ್ಟಂಗಡ ಪರ 2 ವಿಕೆಟ್ ಪಡೆದ ರೋಷನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಸುಮಂತ್ 15 ರನ್ ಗಳನ್ನು ಸೇರಿಸಿದರು. 

 

ಮಹಿಳೆಯರ ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದವರು;

ಆದೇಂಗಡ ಮತ್ತು ಮಣವಟ್ಟಿರ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡ 35 ರನ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಣವಟ್ಟಿರ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಗಳಿಸಿತು. ಆದೇಂಗಡ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 21 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.

ಮಣವಟ್ಟಿರ ಪರ ಶ್ರುತಿ 2 ವಿಕೆಟ್ ಪಡೆದರು, ಅರ್ಪಿತಾ 22 ರನ್ ಗಳನ್ನು ಸೇರಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಆದೇಂಗಡ ಪರ ಶೋಭಾ 1 ವಿಕೆಟ್ ಪಡೆದು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜರಾದರು.

ಅರಮಣಮಾಡ ಮತ್ತು ಕಾಣತಂಡ ತಂಡಗಳಲ್ಲಿ ವಾಕ್ ಓವರ್ ನಿಂದ ಅರಮಣಮಾಡ ಸೆಮಿಫೈನಲ್ ಗೆ ಪ್ರವೇಶ ಪಡೆಯಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0