ಏ.27 ರಿಂದ ಮೇ 01ರವರೆಗೆ ಗುರುಭ್ಯೋ ಮುನೀಶ್ವರ, ಚಾಮುಂಡೇಶ್ವರಿ ಹಾಗೂ ನಾಗ ದೇವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ

Apr 27, 2026 - 16:53
 0  92
ಏ.27 ರಿಂದ ಮೇ 01ರವರೆಗೆ  ಗುರುಭ್ಯೋ ಮುನೀಶ್ವರ, ಚಾಮುಂಡೇಶ್ವರಿ ಹಾಗೂ  ನಾಗ ದೇವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ

ಮಡಿಕೇರಿ: ನಗರದ ಗುರುಭ್ಯೋ ಮುನೀಶ್ವರ, ಚಾಮುಂಡೇಶ್ವರಿ ಹಾಗೂ ನಾಗ ದೇವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಏ.೨೯ರಿಂದ ಮೇ ೧ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಹಿರಿಯ ಗೌರವ ಸಲಹೆಗಾರ ಗಜರಾಜ ನಾಯ್ಡು ತಿಳಿಸಿದ್ದಾರೆ.

 ಸುಮಾರು ೫೫ ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣವಾಗಿದ್ದು, ಕಾಟೇರಮ್ಮನ ಮೂರ್ತಿ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ವಿಶೇಷವಾಗಿದೆ ಏ.೨೯ ಮಂಗಳವಾರ ಬೆಳಿಗ್ಗೆ ೧೦.೧೫ಕ್ಕೆ ಸಂಕಲ್ಪ, ಗುರು ಗಣಪತಿ ಪೂಜೆ, ಸ್ಥಳ ಶುದ್ಧಿ, ರುದ್ರಪಾಠ, ತಿಲ ಹೋಮ, ಸಂಜೆ೬ಕ್ಕೆ ಬನ್ನಿ ಮಂಟಪದಿಂದ ದೇವಾಲಯದವರೆಗೆ ಮಂಗಳವಾದ್ಯದೊಂದಿಗೆ ಕಳಶ ಮೆರವಣಿಗೆ, ರಾತ್ರಿ ೭.೩೦ಕ್ಕೆ ಪ್ರಸನ್ನ ಪೂಜೆ ನಡೆಯಲಿದೆ.

 ಏ.೩೦ ಬುಧವಾರ ಬೆಳಿಗ್ಗೆ ೭ಕ್ಕೆ ಮಹಾಸಂಕಲ್ಪ, ಗಣಪತಿ ಹೋಮ, ಪ್ರಸಾದ ವಿತರಣೆ, ಸಂಜೆ ೫ಕ್ಕೆ ಆದಿವಾಸ, ರಾಕ್ಷೋಗ್ನ ವಾಸ್ತು ಹೋಮ, ಕಳಶ ಸ್ಥಾಪನೆ, ಪ್ರತಿಷ್ಠಾಮೂರ್ತಿಗಳಿಗೆ ಅದಿವಾಸ, ದಿಕ್ಪಾಲಕ ಬಲಿ ನಡೆಯಲಿದೆ. ಮೇ೧ ಗುರುವಾರ ಬೆಳಿಗ್ಗೆ ೬ಕ್ಕೆ ಪ್ರತಿಷ್ಠಾ ಪೂರ್ವ ಹೋಮ, ೧೦.೨೦ರಿಂದ ೧೧.೧೫ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಗುರು ಮುನೀಶ್ವರ ಹಾಗೂ ಚಾಮುಂಡೇಶ್ವರಿ ದೇವಿಯ ಬ್ರಹ್ಮಕಳಶ ಪ್ರತಿಷ್ಠಾಪನೆ, ನಂತರ ಶಕ್ತಿ ಹೋಮ, ರುದ್ರ ಹೋಮ, ಮಹಾಪೂರ್ಣಹುತಿ, ಕಳಸಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪವನ್, ಗುಣಶೇಖರ್, ಸತೀಶ್, ರಾಕೇಶ್, ರಂಜಿತ್ ಕುಮಾರ್ ಇತರರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0