ಬಟರ್ ಫ್ರೂಟ್ ರೆಂಬೆ – ಚಿಗುರುಗಳ ಕಳ್ಳತನ ಪ್ರಕರಣ : 9 ಮಂದಿಯ ಬಂಧನ
ಸಿದ್ದಾಪುರ; ಕಾಫಿ ತೋಟದೊಳಗೆ ಅಕ್ರಮ ಪ್ರವೇಶ ಮಾಡಿ,ಬಟರ್ ಫ್ರೂಟ್ ಗಿಡಗಳ ರೆಂಬೆಗಳನ್ನು ಹಾಗೂ ಚಿಗುರುಗಳನ್ನು ಕಡಿದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಸಂಬಂಧಿಸಿದ 9 ಮಂದಿಯನ್ನು ಬಂಧಿಸಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಾಟಾ ಸಂಸ್ಥೆಗೆ ಸೇರಿದ ಕೋಟೆಬೆಟ್ಟ ತೋಟದ ಒಳಗೆ ಬೆಳೆಸಿದ್ದ ಅವಕಾಡೊ ಗಿಡಗಳ ರೆಂಬೆ ಹಾಗೂ ಚಿಗುರುಗಳನ್ನು ತಡರಾತ್ರಿ ಕತ್ತರಿಸಿ ತೆಗೆದು ಚೀಲದಲ್ಲಿ ತುಂಬಿಸುವ ವೇಳೆಯಲ್ಲಿ ಕಾಫಿ ತೋಟದೊಳಗೆ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಅನುಮಾನಗೊಂಡು ಇಬ್ಬರನ್ನು ಸೆರೆಹಿಡಿದು ಸಂಸ್ಥೆಯ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ.
ಬಳಿಕೆ ಅವರನ್ನು ವಿಚಾರಣೆ ನಡೆಸುವ ಸಂದರ್ಭ ಒಟ್ಟುವ 9ಮಂದಿ ಜೀಪ್ ಮತ್ತು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಕಾಫಿ ತೋಟದೊಳಗೆ ನುಗ್ಗಿ ಗಿಡಗಳ ಚಿಗುರುಗಳನ್ನು ಚಿಗುರುಗಳನ್ನು ಮುರಿದಿರುವ ಕುರಿತು ಮಾಹಿತಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಪರಾರಿಯಾಗಿದ್ದ ಏಳು ಮಂದಿಯ ಹೆಸರುಗಳನ್ನು ಆರೋಪಿಗಳು ತಿಳಿಸಿದ್ದಾರೆ. ಬಳಿಕ ಅವಕಾಡೊ ಗಿಡಗಳಿಂದ ಮುರಿದ್ದಿದ್ದ ಚಿಗುರುಗಳನ್ನು ಮತ್ತು ರೆಂಬೆಗಳನ್ನು ಸಿಬ್ಬಂದಿಗಳು ವಶಪಡಿಸಿ ಕೊಂಡು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಸ್ಥೆಯ ವ್ಯವಸ್ಥಾಪಕ ಸಂಪತ್ ಪಿ.ಎಂ. ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ತೋಟದೊಳಗೆ ಅಕ್ರಮ ಪ್ರವೇಶ ಮಾಡಿದ ಪ್ರಕರಣ ಸಂಬಂಧ ಅವಕಾಡೊ ಗಿಡಗಳನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ ಆರೋಪದಡಿಯಲ್ಲಿ ನಂಜರಾಯಪಟ್ಟಣ ಮತ್ತು ವಾಲ್ನೂರುವಿನ ಕಿರಣ, ಮನೋಜ್. ಸ್ವಾಗತ್, ರಾಶೀಶ್, ಸತ್ತಾರ್, ಸಕೀರ್, ವಿನೋದ್, ಜಯಕುಮಾರ್, ಪ್ರಮೋದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.