ಶಾಸಕ ಎ.ಎಸ್ ಪೊನ್ನಣ್ಣ ಅವರ 40ಲಕ್ಷ ರೂ ಅನುದಾನಲ್ಲಿ ಚಾಮಿಯಾಲ-ಅರಮೇರಿ ರಸ್ತೆ ಕಾಮಗಾರಿ ಪೂರ್ಣ
ವಿರಾಜಪೇಟೆ: ವಿಧಾನಸಭಾ ಕ್ಷೇತ್ರ, ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ-ಅರಮೇರಿ ರಸ್ತೆಯು ದಶಕಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದದ್ದು, ಇಲ್ಲಿಯ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿತ್ತು. ಈ ಹಿಂದೆ ಶಾಸಕರು ಈ ಭಾಗಕ್ಕೆ ಭೇಟಿ ನೀಡಿದ ಸಂದರ್ಭ, ಸ್ಥಳೀಯ ನಾಯಕರು ಹಾಗೂ ಸಾರ್ವಜನಿಕರು ಈ ರಸ್ತೆಯ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿದ್ದರು. ಈ ರಸ್ತೆಯ ಅಭಿವೃದ್ಧಿಯ ಅವಶ್ಯಕತೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ತಮ್ಮ ನಿಧಿಯಿಂದ ರೂ 40 ಲಕ್ಷ ಅನುದಾನ ಒದಗಿಸಿ ಈ ರಸ್ತೆ ಸುಸಜ್ಜಿತವಾಗಿ ನಿರ್ಮಾಣವಾಗುವಂತೆ ನೋಡಿಕೊಂಡಿದ್ದಾರೆ.
ಈ ರಸ್ತೆ ನಿರ್ಮಿಸಲು ಹಾಗೂ ಅನುದಾನ ಒದಗಿಸಲು ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರಾದ ಕಾಳಮಾಂಡ ಬೇಬಿ, ಪ್ರಮುಖರಾದ ಕುಂಡಚ್ಚಿರ ಮಂಜು ದೇವಯ್ಯ, ಪಂಚಾಯಿತಿ ಸದಸ್ಯರಾದ ಅಶ್ವಕ್, ಸ್ಥಳೀಯ ಪ್ರಮುಖರು ಹಾಗೂ ಇದಕ್ಕೆ ಶ್ರಮಿಸಿದ ಎಲ್ಲರಿಗೂ ಸಾರ್ವಜನಿಕರು ಧನ್ಯವಾದ ಅರ್ಪಿಸಿದ್ದಾರೆ.