ಚೆಂಬೆಬೆಳ್ಳೂರು:ಶಾಸಕ ಎ.ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ
ವಿರಾಜಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಒಳಪಡುವ, ಮಂಡೆಪಂಡ ಹಾಗೂ ಚೆಂದಂಡ ಕುಟುಂಬಗಳಿಗೆ ತೆರಳುವ, ಸಾರ್ವಜನಿಕ ಬಳಕೆಯ ರಸ್ತೆಗೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಅನುದಾನದಲ್ಲಿ, ನೂತನವಾದ ಕಾಂಕ್ರೀಟ್ ರಸ್ತೆ ಕುಟುಂಬಸ್ಥರ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧಗೊಂಡಿದೆ. ಈ ಹಿಂದೆ ಮಾನ್ಯ ಶಾಸಕರಿಗೆ ರಸ್ತೆಯ ಅಭಿವೃದ್ಧಿ ಕುರಿತು ಮನವಿ ಬಂದಾಗ, 5 ಲಕ್ಷ ರೂಗಳ ಅನುದಾನವನ್ನು ಒದಗಿಸಿದ್ದರು. ಇದೀಗ ಈ ರಸ್ತೆಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.