ಚಾಮಿಯಾಲ ಮಸೀದಿ ಹಾಗೂ ಅಂಗನವಾಡಿ ಜಾಗದ ವಿಷಯದಲ್ಲಿ ಗಲಾಟೆ:13 ಮಂದಿಯ ವಿರುದ್ಧ ಪ್ರಕರಣ ದಾಖಲು
ಪ್ರಕರಣ:01 ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಅವರ ಮೇಲೆ ಮಸೀದಿ ಹಾಗೂ ಅಂಗನವಾಡಿ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ವಿಷಯದಲ್ಲಿ ಚಾಮಿಯಾಲದ ಐವರು ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ BNS 2023, (U\s109,352,351(3),54r\w3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಾಮಿಯಾಲದ ಇಸ್ಮಾಯಿಲ್, ತನ್ಸೀಯಾ, ಸಫ್ರಿಯಾ,ಸಮ್ರಿಯಾ ಹಾಗೂ ಇರ್ಷಾದ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣ 02: ಚಾಮಿಯಾಲ ಮೇಲೆ ಮಸೀದಿ ಹಾಗೂ ಅಂಗನವಾಡಿ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ವಿಷಯದಲ್ಲಿ ಚಾಮಿಯಾಲ ಗ್ರಾಮದ ಎಂಟು ಮಂದಿಯ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಾಮಿಯಾಲ ಗ್ರಾಮಾದ ಸೈಫುದ್ದೀನ್ ಕೆ.ಹೆಚ್, ಅಜ್ಮುದ್ದೀನ್ ಕೆ.ಹೆಚ್,ಅನೀಫ ಕೆ.ಹೆಚ್,ಅಶ್ಫಾಕ್ ಕೆ.ಎ,ರಶೀದ್ ಕೆ.ಯು,ಸಾದುಲಿ,ಆಲಿ ಕೆ.ಎ,ಶಂಸುದ್ದೀನ್ ಕೆ.ಯು,ಅವರ ಮೇಲೆ ತನ್ಸೀಯಾ ಕೆ.ಇ ಅವರ ನೀಡಿರುವ ದೂರಿನ್ವಯ (BNS) 2023(U\s-329(3),118(1,)74, 352,351(2)r\w3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.