ಕೊಡಗು ಯುವ ಕಾಂಗ್ರೆಸ್ ನಲ್ಲಿ ಗೊಂದಲ:ಚುನಾವಣೆಯಲ್ಲಿ ಸ್ಪರ್ಧಿಸದ ವ್ಯಕ್ತಿಗೆ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ : ಜುಬೈರ್ ಆರೋಪ

ಕೊಡಗು ಯುವ ಕಾಂಗ್ರೆಸ್ ನಲ್ಲಿ ಗೊಂದಲ:ಚುನಾವಣೆಯಲ್ಲಿ ಸ್ಪರ್ಧಿಸದ ವ್ಯಕ್ತಿಗೆ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ : ಜುಬೈರ್ ಆರೋಪ

ವರದಿ:ಝಕರಿಯ ನಾಪೋಕ್ಲು ನಾಪೋಕ್ಲು 

 ಚುನಾವಣೆಯಲ್ಲಿ ಸ್ಪರ್ಧಿಸದ ವ್ಯಕ್ತಿಗೆ ನೇರ ನೇಮಕಾತಿ ಮೂಲಕ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಎಮ್ಮೆಮಾಡುವಿನ ಜುಬೈರ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅದರಲ್ಲಿ ನಾಪೋಕ್ಲುವಿನ ಕೆ. ಎ. ನಿಜಾರ್ ಹಾಗೂ ಎಮ್ಮೆಮಾಡುವಿನಿಂದ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ. ಆದರೆ ಫಲಿತಾಂಶದಲ್ಲಿ ನಿಜಾರ್ ಅವರು ಗೆಲುವು ಸಾಧಿಸಿದ್ದರು. ಚುನಾವಣೆ ನಡೆದ ಬಳಿಕ ನಿಜಾರ್ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಚುನಾವಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದು ಉಪಾಧ್ಯಕ್ಷನಾಗಿದ್ದ ನಾನು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಬೇಕಾಗಿತ್ತು.ಆದರೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ಮೂರನೇ ವ್ಯಕ್ತಿಯನ್ನು ನೇರ ನೇಮಕಾತಿ ಮಾಡಿ ಶಾಸಕ ಪೊನ್ನಣ್ಣ ಅವರ ನೇತೃತ್ವದಲ್ಲಿ ಅಧ್ಯಕ್ಷ ಸ್ಥಾನದ ಗದ್ದಿಗೆ ಹೇರಿಸಿರುವುದು ಸರಿಯಲ್ಲ ಎಂದು ಜುಬೈರ್ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಕಣದಲ್ಲಿ ಇಬ್ಬರು ಮಾತ್ರ ಸ್ಪರ್ಧಿಸಿದ್ದು ಆದರೆ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ಮೂರನೇ ವ್ಯಕ್ತಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದಾದರೂ ಹೇಗೆ ಎಂದು ಪ್ರಶ್ನಿಸಿದ ಜುಬೈರ್ ಈ ಬಗ್ಗೆ ಶಾಸಕ ಪೊನ್ನಣ್ಣಅವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.ಇಲ್ಲದಿದ್ದರೆ ಮುಂಬರುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡಲಾಗುವುದು ಎಂದು ಎಮ್ಮೆಮಾಡುವಿನಲ್ಲಿ ಜುಬೈರ್ ತಿಳಿಸಿದ್ದಾರೆ.