ಸೈಬರ್ ಕ್ರೈಂ ಬಗ್ಗೆ ಗ್ರಾಹಕರಿಗೆ ಜಾಗೃತಿ

ಸೈಬರ್ ಕ್ರೈಂ ಬಗ್ಗೆ ಗ್ರಾಹಕರಿಗೆ ಜಾಗೃತಿ

ಸಿದ್ದಾಪುರ; ವಿರಾಜಪೇಟೆ ತಾಲ್ಲೂಕಿ ನ ಸಿದ್ದಾಪುರದ  ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸೈಬರ್ ಕ್ರೈಂ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಯಿತು. 

 ಬ್ಯಾಂಕ್ ಮ್ಯಾನೇಜರ್ ಮೋಹನ್, ಮಾತನಾಡಿ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡುವ ಮೋಸಗಾರರಿಂದ ವೈಯಕ್ತಿಕ ಮಾಹಿತಿ ಮತ್ತು ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬಾರದು ಜೊತೆಗೆ, ಅಪರಿಚಿತ ಲಿಂಕ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಕ್ಲಿಕ್ ಮಾಡದಂತೆ, ಹಾಗೂ ಸುರಕ್ಷಿತ ನೆಟ್‌ವರ್ಕ್‌ಗಳನ್ನು ಮಾತ್ರ ಬಳಸುವಂತೆ ಸಲಹೆ ನೀಡಲಾಯಿತು ಒಂದು ವೇಳೆ ಸೈಬರ್ ವಂಚನೆ ನಡೆದರೆ, ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ಸಲ್ಲಿಸುವಂತೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಗ್ರಾಹಕರಿಗೆ ಬಿತ್ತಿ ಪತ್ರವನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಗ್ರಾಹಕರದ ಲೋಕೇಶ್, ಮೋಹನ್,ಅಂತೋಣಿ,ಸವಿತ,ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿಗಳಾದ ಸುರೇಶ್, ಅಭಿಮನ್ಯು, ಅಪರ್ಣ, ವಿನೋದ್, ಗಂಗಾ , ಹಾಜರಿದ್ದರು.