ಕುಶಾಲನಗರದ ತಾಯಿ ಮತ್ತು ಅಪ್ರಾಪ್ತ ಬಾಲಕನ ಮತಾಂತರ: ಚುರುಕುಗೊಂಡ ಪೋಲಿಸ್ ತನಿಖೆ
ಕುಶಾಲನಗರ: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದಿರುವ ಅಪ್ರಾಪ್ತ ಬಾಲಕ ಸಂಬಂಧಿತ ಘಟನೆ ಹಾಗೂ ಚಟುವಟಿಕೆಗಳ ಕುರಿತ, ಈ ಪ್ರಕರಣವು ಪೀಡಿತ ವ್ಯಕ್ತಿ ರಾಜೀವ್ ಅವರ ದೂರಿನ ಆಧಾರದ ಮೇಲೆ ಹಿಂದೂ ಹಿತರಕ್ಷಣ ಸಮಿತಿಯು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಾರ್ವಜನಿಕ ಗಮನಕ್ಕೆ ತರುತ್ತಿದ್ದೇವೆ ಎಂದು ಸಮಿತಿಯ ಮುಖಂಡರಾದ ಭರತ್ ಮಾಚಯ್ಯ ಹೇಳಿದರು.
ಕುಶಾಲನಗರದ ಪತ್ರಿಕಾ ಭವನದಲ್ಲಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ಮೊದಲು ಅಪ್ರಾಪ್ತ ಬಾಲಕ ಮತ್ತು ಆತನ ತಾಯಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿ, ಪೊಲೀಸರು ಆ ಇಬ್ಬರನ್ನು ಪತ್ತೆ ಹಚ್ಚಿರುವುದು ಗಮನಹವಾಗಿದೆ. ಈ ಸಂಬಂಧ ಪೊಲೀಸ ಇಲಾಖೆ ತನಿಖೆ ನಡೆಸುತ್ತಿದೆ ಎಂದರು.
ಆದರೂ ಈ ಪ್ರಕರಣದಲ್ಲಿ ಗಂಭೀರ ವಿಚಾರಗಳು ಬೆಳಕಿಗೆ ಬಂದಿದೆ ಕುಟುಂಬದ ಆಸ್ತಿ ಮಾರಿ ಬಂದ ಹಣವನ್ನು ಬಾಲಕನ ಪಾಲನೆಗಾಗಿ ಮಹಿಳೆಗೆ ನೀಡಲಾಗಿದೆ ಎಂಬ ಮಾಹಿತಿ ಇದ್ದರೂ, ಆ ಹಣವನ್ನು ಬಾಲಕನ ಹಾರೈಕೆ ಮತ್ತು ಪಾಲನೆಗಾಗಿ ಬಳಕೆಯಾಗದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮತ್ತೊಂದೆಡೆ ಮಗು ಸಂಬಂಧಿಕರ ವಶದಲ್ಲಿರುವುದು ಸಹ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಅನುಮಾನಗಳಿವೆ. ಮಹಿಳೆ ಮತ್ತು ಬಾಲಕನನ್ನು ಪೊಲೀಸರು ರಕ್ಷಿಸಿದ ಮೇಲೆ ಕೇರಳ ರಾಜ್ಯದ ಮಂಜೇರಿ ಪ್ರದೇಶದಲ್ಲಿರುವ ಒಂದು ತರಬೇತಿ ಕೇಂದ್ರದಲ್ಲಿರಿಸಲಾಗಿದೆ ಎಂಬ ಮಾಹಿತಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಅಮೃತ ರಾಜ್ ಅವರು ಈ ಘಟನೆಗಳ ಹಿಂದೆ ಪೊಲೀಸರಲ್ಲಿ ದೂರು ದಾಖಲಿಸಿದಂತೆ ಲವ್ ಜಿಹಾದ್, ಮತ್ತು ಹಣ ಲಪಟಾಯಿಸಿರುವ ಮಾಹಿತಿ ಇದೆ. ಇದಕ್ಕೆ ಸಂಬಂಧಪಟ್ಟ ದೂರಿನ ಅನ್ವಯ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿ ಮಡಿಕೇರಿ ಜೈಲಗೆ ಕಳಿಸಿದ್ದಾರೆ. ಇದರಲ್ಲಿ ಸಂಬಂಧಿಸಿದ ವ್ಯಕ್ತಿ ಕುಶಾಲನಗರದ ಕಾವೇರಿ ನಿಸರ್ಗಧಾಮ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದು, ಆ ಅಂಗಡಿಗಳ ಕಾನೂನು ಬದ್ಧತೆ, ಪರವಾನಿಗೆ ಮತ್ತು ಸ್ಥಳೀಯ ನಿಯಮಗಳ ಅನುಸರಣೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ ಎಂದರು.
ಈ ಅಂಗಡಿಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟ ಪರವಾನಿಗೆ ಮತ್ತು ತೂಕ ಅಳತೆಯ ನಿಯಮಗಳ ಪಾಲನೆ, ಕುರಿತು ಆಹಾರ ಸುರಕ್ಷಿತ ಪ್ರಾಧಿಕಾರ ಮತ್ತು ತೂಕ ಅಳತೆ ಇಲಾಖೆಗಳು ಸಹ ಪರಿಶೀಲಿಸಬೇಕಾಗಿದೆ ಎಂದರು.
ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಸಿ.ಎಂ. ಗಣಿ ಪ್ರಸಾದ್ ಮಾತನಾಡಿ, ಈ ಪ್ರಕರಣದಲ್ಲಿ ಮದುವೆಯಾಗಿ ಮಗ ಹೊಂದಿರುವ ಹೆಣ್ಣನ್ನು ಮೋಸದ ಜಾಲದಲ್ಲಿ ಸಿಲುಕಿಸಿ ಮತಾಂತರಗೊಳಿಸುವ ಪ್ರಕ್ರಿಯೆ ಈ ಪ್ರಕರಣದಲ್ಲಿ ನಡೆದಿದೆ. ಈ ಮೂಲಕ ಅನೇಕ ಆರ್ಥಿಕ ಮುಗ್ಗಟ್ಟಿರುವ ಮುಗ್ಧರು, ಇಂಥವರ ಮೋಸ ಜಾಲದಲ್ಲಿ ಸಿಲುಕಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗ ಹೊರ ಬಂದಿರುವ ಈ ಪ್ರಕರಣ ಒಂದು ಸ್ಯಾಂಪಲ್ ಮಾತ್ರ ಇಂತ ಘಟನೆಗಳು ಬಹಳಷ್ಟು ನಡೆದಿವೆ ಎಂಬುದು ಕಂಡು ಬರುತ್ತದೆ ತಕ್ಷಣ ಈ ಪ್ರಕರಣದ ಹಿಂದಿರುವ ಸಮಾಜಘಾತಕ ಶಕ್ತಿಗಳನ್ನು ಪತ್ತೆಹಚ್ಚಿ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಅನಿವಾರ್ಯವೇನಿಸಿದರೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಕುಶಾಲನಗರ ಮಲಯಾಳಿ ಸಮಾಜದ ಮುಖಂಡರಾದ ವರದ ಅವರು ಮಾತನಾಡಿ, ಕುಶಾಲನಗರದ ಕೆಲವು ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಕೊರತೆಯಾಗುವ ರೀತಿಯಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿವೆ, ಆರ್ಥಿಕ ದುರ್ಬಲತೆ ಎಂಬ ನ್ಯೂನತೆಗಳನ್ನು ಬಳಸಿಕೊಂಡು ದೇಶ ವಿರೋಧಿ ಶಕ್ತಿಗಳು ಮತಾಂತರದ ಪ್ರಯತ್ನಕ್ಕೆ ಮುಂದಾಗಿರುವುದು ಕಂಡುಬರುತ್ತಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಜಾಗೃತೆವಹಿಸಿ ಈ ಜಾಲದಲ್ಲಿರುವ ಎಲ್ಲರನ್ನೂ ಕಾನೂನಿಗೆ ಒಳಪಡಿಸಬೇಕೆಂಬ ಒತ್ತಾಯ ಹಿಂದೂ ಹಿತರಕ್ಷಣ ಸಮಿತಿ ಮೂಲಕ ಮನವಿ ಮಾಡುತ್ತೇವೆ, ಈಗ ಹೊರ ಬಂದಿರುವ ಮೋಸದ ಜಾಲಕ್ಕೆ ಸಿಲುಕಿರುವ ಮಹಿಳೆ ಮತ್ತು ಅಪ್ರಾಪ್ತ ಬಾಲಕನ ಪ್ರಕರಣಕ್ಕೆ ಪೊಲೀಸರು ಕುಟುಂಬಕ್ಕೆ ಸರಿಯಾದ ನ್ಯಾಯ ಕೊಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಇಲ್ಲದಿದ್ದರೆ ಅವರ ಪರವಾಗಿ ಶಾಂತಿಯುತ ಹೋರಾಟವನ್ನು ಕಾವೇರಿ ನಿಸರ್ಗಧಾಮ ವಾಣಿಜ್ಯ ಸಂಕೀರ್ಣ ಪ್ರದೇಶದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು.

