ಗೋಣಿಕೊಪ್ಪದಲ್ಲಿ ಡಿಜೆ ಬಂದ್: ಮಧ್ಯರಾತ್ರಿ ಪ್ರತಿಭಟನೆ
ಗೋಣಿಕೊಪ್ಪಲಿನಲ್ಲಿ ಮಧ್ಯರಾತ್ರಿ ಕೆಲವು ಮಂಟಪಗಳಲ್ಲಿ ಅಳವಡಿಸಲಾಗಿದ್ದ ಡಿಜೆ ಸೌಂಡ್ ಸಿಸ್ಟಮ್ ಅನ್ನು ಬಂದ್ ಮಾಡಲಾಗಿತ್ತು. ಹುಚ್ಚೆದ್ದು,ಕುಣಿಯುತ್ತಿದ್ದೋರು ದಿಢೀರನೆ ರಸ್ತೆ ಮಧ್ಯದಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು. ಬೆಳಗಿನ ಜಾವ ಒಂದುವರೆ ಗಂಟೆಯಿಂದ 6 ಗಂಟೆ ವರೆಗೆ ಡಿ.ಜೆ ಬಂದ್ ಮಾಡಲಾಗಿತ್ತು.ಬೆಳಗಾಗುತ್ತಿದ್ದಂತೆ ಮತ್ತೆ ಡಿ.ಜೆ ಅಬ್ಬರಕ್ಕೆ ಸಮಿತಿಗಳ ಮಂಟಪಗಳ ಮುಂಭಾಗ ಕುಣಿಯಲು ಆರಂಭಿಸಿದರು.