ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ: ವಿಶೇಷ ಚೇತನರು ತಮ್ಮ ನೂನ್ಯತೆಯನ್ನು ಮರೆತು ಸಮಾಜದಲ್ಲಿ ಸಾಧನೆಯನ್ನು ಮಾಡಲು ಪ್ರಯತ್ನಿಸಿ: ಶಾಸಕ ಎಎಸ್ ಪೊನ್ನಣ್ಣ

ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ: ವಿಶೇಷ ಚೇತನರು ತಮ್ಮ ನೂನ್ಯತೆಯನ್ನು ಮರೆತು ಸಮಾಜದಲ್ಲಿ  ಸಾಧನೆಯನ್ನು ಮಾಡಲು ಪ್ರಯತ್ನಿಸಿ: ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಕ್ಷೇತ್ರದ ಆಯ್ದ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ, ದ್ವಿಚಕ್ರವಾಹನವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿತರಿಸಿದರು.

ಶಾಸಕರ ವಿಶೇಷ ನಿಧಿಯಿಂದ ನೀಡುತ್ತಿರುವ ಈ ಸೌಲಭ್ಯವನ್ನು ವಿತರಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ.ವಿಶೇಷ ಚೇತನರು ತಮ್ಮ ನೂನ್ಯತೆಯನ್ನು ಮರೆತು ಸಮಾಜದಲ್ಲಿ ತಮ್ಮ ಕೈಲಾದ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕೆಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು. ವಿಶೇಷ ಆದ್ಯತೆ ಮೇರೆಗೆ ಇಂತಹ ವ್ಯಕ್ತಿಗಳಿಗೆ ತಾನು ಸಹಾಯ ಮಾಡಲು ಸದಾ ಸಿದ್ಧವಿರುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು.

 ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ಪುರಸಭೆ ಸದಸ್ಯರಾದ ರಜಿನಿಕಾಂತ್,ರಾಫಿ,ಪಕ್ಷದ ಪ್ರಮುಖರು ಜೋಕಿಮ್, ಕುಂದಚೀರ ಮಂಜು ದೇವಯ್ಯ, ಶಬೀರ್, ಮಂಜುನಾಥ್, ಮಹದೇವ, ಅಧಿಕಾರಿಗಳು ಫಲಾನುಭವಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.