ನಾಳೆ ಮಡಿಕೇರಿಯಲ್ಲಿ ಜಿಲ್ಲಾ ಎಸ್.ವೈ.ಎಸ್ ವತಿಯಿಂದ ಸ್ವಚ್ಛತಾ ಅಭಿಯಾನ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಆ.14 ರ (ನಾಳೆ) ಮಡಿಕೇರಿಯಲ್ಲಿ ಫ್ರೆಶ್ ಇಂಡಿಯಾ ಎಂಬ ಧ್ಯೇಯ ವಾಕ್ಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ಇಸಾಬ ತಂಡವು ಮಡಿಕೇರಿ ಸರ್ಕಾರಿ ಆಸ್ಪತ್ರೆ ಆವರಣ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿರುವ ನಾಮಫಲಕ ಹಾಗೂ ಸೂಚನಾಪಲಕಗಳನ್ನು ಸ್ವಚ್ಛ ಗೊಳಿಸಲಿದೆ. ಎಸ್ ವೈ ಎಸ್,ಎಸ್ಎಸ್ ಎಫ್ ನ ಇಸಾಬ ತಂಡದ 200 ಕ್ಕೂ ಅಧಿಕ ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಇಸಾಬ ಸಂಚಾಲಕರಾದ ಶಾಫಿ ಸಅದಿ ಸೋಮವಾರಪೇಟೆ ಹಾಗೂ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.