ಕಡಂಗಮೂರೂರುನಲ್ಲಿ ಮೇ. 5ರಂದು ದೈವಗಳ ನೇಮೋತ್ಸವ

Apr 30, 2026 - 19:54
 0  101
ಕಡಂಗಮೂರೂರುನಲ್ಲಿ ಮೇ. 5ರಂದು ದೈವಗಳ ನೇಮೋತ್ಸವ

ವಿರಾಜಪೇಟೆ: ದ.ಕನ್ನಡ ದಲ್ಲಿ ಪ್ರಚಲಿತದಲ್ಲಿರುವ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಮೇ ತಿಂಗಳ 5 ರಂದು ಕಡಂಗಮೂರೂರು ಗ್ರಾಮದ ನಾಲ್ಕನೇ ಮೈಲಿನಲ್ಲಿ ನಡೆಯಲಿದೆ.

ವಿರಾಜಪೇಟೆ ತಾಲ್ಲೂಕಿನ ಕಡಂಗಮೂರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕನೇ ಮೈಲಿಯ ಪಿ.ಪಿ. ಲೋಕೇಶ್ ಅವರ ಕುಟುಂಬ ನೆಲೆಸಿರುವ ಭಾಡಿಗೆ ಮನೆಯಲ್ಲಿ 3 ನೇ ವರ್ಷದ ದೈವಗಳ ನೇಮೋತ್ಸವ ನಡೆಯಲಿದೆ.

 ತಾ.05-05-2026 ರಂದು ಸಂಜೆ ದೈವಗಳಿಗೆ ಅಲಂಕಾರ ಸೇವೆ,ಮಹಾ ಪೂಜೆ, ಚಂಡೆವಾದ್ಯ, ನಂತರ ಪಾಷಾಣಮೂರ್ತಿ ದೈವ ಮತ್ತು ಇತರ ದೈವಗಳ ದರ್ಶನ ಬಳಿಕ ಅನ್ನಸಂತರ್ಪಣೆ ಜರುಗಲಿದೆ.ಅಣ್ಣಪ್ಪ ಪಂಜರ್ಲಿ ದೈವ ನೇಮ,ವರ್ಣ ಪಂಜುರ್ಲಿ ದೈವ ಮತ್ತು ಪಾಷಾಣಮೂರ್ತಿ ದೈವ ಗಳ ನೇಮ ನಡೆಯಲಿದೆ.

ತಾ. 06 ರಂದು ಬುಧವಾರ ಬೆಳಿಗ್ಗೆ ಗುಳಿಗ ಮತ್ತು ಕೊರಗಜ್ಹ ದೈವಗಳ ನೇಮ ನಡೆಯಲಿದೆ. ದೈವಗಳಿಗೆ ಪ್ರಸಾದ ಅರ್ಪಣೆ, ಅಗಮಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಪಿ.ಪಿ. ಲೋಕೇಶ್ 8105403505, ಪ್ರಮೀಳಾ 8867147501, ವಾಣಿ : 8147704308 ಮತ್ತು ಜಗದೀಶ್ : 9482332337 ಸಂಖ್ಯೆ ಗಳನ್ನು ಸಂಪರ್ಕಿಸುವುದು. ಎರಡು ದಿನಗಳು ನಡೆಯುವ ದೈವಗಳ ನೇಮೋತ್ಸವ ಕ್ಕೆ ನಾಡಿನ ಸಮಸ್ತ ಭಕ್ತರು ಆಗಮಿಸಿ ದೈವಗಳ ಆರ್ಶಿವಾದ ಪಡೆಯುವಂತೆ. ಅಯೋಜಕ ಕುಟುಂಬ ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವರದಿ; ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0