ಒತ್ತಡದ ನಡುವೆಯೂ ವಯೋವೃದ್ದೆಯ ಚಿಕಿತ್ಸೆ ಗೆ ನೆರವಾದ ಡಾ ಮಂತರ್ ಗೌಡ
ಮಡಿಕೇರಿ:ಅತೀವ ಕೆಲಸದ ಒತ್ತಡದ ನಡುವೆಯೂ ವೃದ್ದೆಯೊಬ್ಬರ ಬಗ್ಗೆ ಕಾಳಜಿ ವಹಿಸಿ ಅವರ ಚಿಕಿತ್ಸೆ ಗೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಪ್ರಸಂಗ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರಿಂದ ನಡೆದಿದೆ.
ಕ್ಷೇತ್ರದ್ಯಾದಂತ ಬಿಡುವಿಲ್ಲದ ಪ್ರವಾಸ,ಜೊತೆಗೆ ಅರ್ಜಿ ಸಮಿತಿಯ ತಂಡದ ಸದಸ್ಯರಾದ ಹತ್ತಾರು ಶಾಸಕರುಗಳ ತಂಡ ಜಿಲ್ಲೆಯಲ್ಲಿ ತಂಗಿದ್ದು ಎಲ್ಲವನ್ನೂ ಸ್ಥಳೀಯ ಶಾಸಕರಾದ ಡಾ ಮಂತರ್ ಗೌಡ ರವರೇ ಶಿಷ್ಟಾಚಾರದ ಅನುಸಾರ ನಿಭಾಯಿಸಬೇಕು. ಇಂತಹ ಒತ್ತಡದ ಸಮಯದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ವೃದ್ದೆಯ ಸಮಸ್ಯೆ. ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸಿ ಡಾ ಮಂತರ್ ಗೌಡ ರವರು ತಾವು ಒಬ್ಬ ಪರಿಪೂರ್ಣ ಜನಪ್ರತಿನಿಧಿ ಎಂದು ನಿರೂಪಿಸಿದ್ದಾರೆ. ಮಡಿಕೇರಿ ಜಿಲ್ಲಾ ಆಸ್ಪತ್ರೆ ಯಲ್ಲಿ ಕುಶಾಲನಗರದ ನಿವಾಸಿ 80 ವರ್ಷದ ಪ್ರಾಯದ ವೃದ್ದೆಯೊಬ್ಬರು ಬಹು ಅಂಗಾಂಗಗಳ ಸಮಸ್ಯೆಯ ಹಿನ್ನಲೆಯಲ್ಲಿ ಚಿಕಿತ್ಸೆ ಗೆ ಒಳರೋಗಿಯಾಗಿ ದಾಖಲಾಗಿದ್ದಾರೆ.ಪ್ರತಿ ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡುವ ಅಗತ್ಯ ಕಂಡು ಬಂದಿದೆ.ರೋಗಿಯ ಬಳಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ದಾಖಲೆಗಳು ಇಲ್ಲದಿರುವುದರಿಂದ ವಿನಾಯಿತಿಯಡಿ ಚಿಕಿತ್ಸೆ ನೀಡಲು ಅಸಾಧ್ಯವಾಗಿದೆ.
ರೋಗಿಯ ಕುಟುಂಬಸ್ಥರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರ ಮುಖೇನ ಸಮಸ್ಯೆಯನ್ನು ಮಂತರ್ ಗೌಡ ರವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸರ್ಕಾರದ ಗಮನಕ್ಕೆ ಈ ವಿಚಾರವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲು ಮಂತರ್ ಗೌಡ ರವರು ಸೂಚಿಸಿದ ಹಿನ್ನಲೆ ಚಿಕಿತ್ಸೆ ನೀಡಲು ರಿಯಾಯಿತಿ ನೀಡಲಾಗಿದೆ. ಕ್ಷೇತ್ರದ ಜನತೆಯ ಬಗ್ಗೆ ವಿಶೇಷ ಕಾಳಜಿವಹಿಸಿದ ಡಾ ಮಂತರ್ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.