Kodagu

ಡಾ.ಸೂಯ೯ಕುಮಾರ್ ಅವರ ಮಂಗಳಿ ಕೖತಿಗೆ ಪ್ರಶಸ್ತಿ

admincoorgdaily

ಮಡಿಕೇರಿ - ಮಡಿಕೇರಿಯ ಹಿರಿಯ ವೈದ್ಯ ಸಾಹಿತಿ ಡಾ.ಕೆ.ಬಿ. ಸೂಯ೯ಕುಮಾರ್ ಅವರ ಮಂಗಳಿ ಕೖತಿಗೆ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಅತ್ಯುತ್ತಮ ಕೖತಿ ಪ್ರಶಸ್ತಿ ದೊರಕಿದೆ. ಡಾ. ಇಂದಿರಾ ದೊಡ್ಡಬಳ್ಳಾಪುರ ಅವರು ನೀಡಿರುವ ಪ್ರಶಸ್ತಿಯು ಸೂಯ೯ಕುಮಾರ್ ಅವರು ಬರೆದಿರುವ ಮಂಗಳಮುಖಿಯರ ಜೀವನ ಶೈಲಿಯ ನಿರೂಪಣೆ ಇರುವ ಮಂಗಳಿ ಕೖತಿಗೆ ಸಂದಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಆಗಸ್ಟ್ 24 ರಂದು ಬಳ್ಳಾರಿಯಲ್ಲಿ ಆಯೋಜಿತವಾಗಿದೆ. ಈವರೆಗೂ ಡಾ. ಸೂಯ೯ಕುಮಾರ್ ಅವರು ಕನ್ನಡದಲ್ಲಿ ಏಳು ಮತ್ತು ಇಂಗ್ಲೀಷ್ ನಲ್ಲಿ ಒಂದು ಕೖತಿಗಳನ್ನು ಪ್ರಕಟಿಸಿದ್ದಾರೆ.