ಇವಾಲ್ವ್ ಬ್ಯಾಕ್ ರೆಸಾರ್ಟ್ ವತಿಯಿಂದ ಸ್ವಚ್ಚ ಕೊಡಗು- ಸಂದರ ಕೊಡಗು ಅಭಿಯಾನ

ಇವಾಲ್ವ್ ಬ್ಯಾಕ್ ರೆಸಾರ್ಟ್ ವತಿಯಿಂದ ಸ್ವಚ್ಚ ಕೊಡಗು- ಸಂದರ ಕೊಡಗು ಅಭಿಯಾನ

ಸಿದ್ದಾಪುರ: ಸ್ವಚ್ಚ ಕೊಡಗು- ಸಂದರ ಕೊಡಗು ಅಭಿಯಾನದ ಅಂಗವಾಗಿ ಸಿದ್ದಾಪುರದ ಇವಾಲ್ವ್ ಬ್ಯಾಕ್ ರೆಸೋರ್ಟ್ ವತಿಯಿಂದ ಕರಡಿಗೋಡು ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಯಿತು. ರೆಸಾರ್ಟ್ ನ ಸಿಬ್ಬಂದಿಗಳು ಕರಡಿಗೋಡು ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಶುಚಿಗೊಳಿಸಿದರು. ಇದೇ ಸಂದರ್ಭ ಗ್ರಾಮದ ಜನರಿಗೆ ಗ್ರಾಮ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭ ರೆಸಾರ್ಟ್ ನ ವ್ಯವಸ್ಥಾಪಕರಾದ ಥೋಮಸ್ ಪೌಲ್, ಪ್ರಮುಖರಾದ ವಸಂತ್, ಜಸ್ಟಿನ್ ಟೋಮಿ, ಅನಿಲ್, ಶಶಿಕುಮಾರ್, ಜೆನ್ನಿ ಸುರೇಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.