ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿ: ಶಾಸಕ ಡಾ.ಮಂತರ್ ಗೌಡ

ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿ: ಶಾಸಕ ಡಾ.ಮಂತರ್ ಗೌಡ

ಕುಶಾಲನಗರ; ತಮ್ಮಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆ ನಿಮ್ಮ ಪಾಲಿಗೆ ಅಡಿಪಾಯವಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯೇತ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಂತಹ ವಿದ್ಯಾರ್ಥಿ ದಿಸೆಯಲ್ಲಿಯೇ ವೇದಿಕೆಯನ್ನು ಬಳಸಿಕೊಳ್ಳಬೇಕು‌.ಆಗಿದ್ದಾಗ ಮಾತ್ರ ತಮ್ಮ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಬೇಕು.ಈ ವಿದ್ಯಾರ್ಥಿಗಳ ಜೋತೆಯಲ್ಲಿ ಉಪನ್ಯಾಸಕರು ಕೂಡ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರಲ್ಲದೇ, ಕೇವಲ ಪಠ್ಯೇತರ ಚಟುವಟಿಕೆಗಳ ಜೋತೆಗೆ ಪಠ್ಯದಲ್ಲೂ ಭಾಗವಹಿಸಬೇಕು.

ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡಿದರೆ ಅಪರಾದ ಎದುರಿಸಬೇಕಾಗುತ್ತದೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹುಣಸೂರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ ಪುರಷ್ಕೃತ ಹೆಚ್.ಎನ್ ಗಿರೀಶ್ ಅವರು,ಮಕ್ಕಳಲ್ಲಿ ಬಹು ಮುಖ್ಯವಾಗಿ ತಾಳ್ಮೆ, ಗೌರವ ಇರಬೇಕು.ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಲು ಓದುವ ಸಮಯದಲ್ಲಿ ಗುರಿ ಇಟ್ಟುಕೊಳ್ಳಬೇಕು.ಯುವ ಜನಾಂಗ ತಮ್ಮ ಮನಸ್ಸನ್ನು ಗಾಳಿಗೆ ತೂರದೇ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ತಮ್ಮ ಸಾಧನೆಯ ಗುರಿ ಮುಟ್ಟಲು ಸಾದ್ಯವಿದೆ.

ಸಾಮಾಜಿಕ ಜಾಲತಾಣದಿಂದ ಮತ್ತು ಯುವಜನಾಂಗ ಮಾಡುವ ತಪ್ಪಿನಿಂದ ರಾಜ್ಯದಲ್ಲಿ 82 ಸಾವಿರ ಗರ್ಬೀಣಿರಾಗಿದ್ದಾರೆ.ಇದು ಅನಾವಶ್ಯಕ ಮೊಬೈಲ್ ಬಳಕೆಯಿಂದ ಆಗುವ ಅನಾಹುತ ಹಾಗೂ ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ಷಾರೆ.ಇದರಿಂದ‌ಪೋಷಕರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ದುರದೃಷ್ಖರ.ಈ ನಿಟ್ಟಿನಲ್ಕಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಇರಬೇಕು.ಗುರು, ಪುಸ್ತಕ, ಪೋಷಕರನ್ನು ಪ್ರೀತಿಸಬೇಕು. ಪಠ್ಯದ ಜೋತೆಗೆ ಪಠ್ಯೇತರ ಚಟುವಟಿಕೆಗಳು ಇರಬೇಕಾಗಿದೆ‌.ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳಗಳಬೇಕು.ಇವೆಲ್ಲದರಿಂದ ವಿಶೇಷ ವಿದ್ಯಾರ್ಥಿ ರೂಪುಗೊಳ್ಳಲಿದ್ದಾರೆ ಎಂದು ಗಿರೀಶ್ ಕಿವಿಮಾತು ಹೇಳಿದರು.

 ಕಾರ್ಯಕ್ರಮವನ್ಜು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜೇಗೌಡ, ಬೋಧನೆಯು ಶೈಕ್ಷಣಿಕ, ದೈಹಿಕ ವಾಗಿ ತರಗತಿಯಲ್ಲಿ ನಡೆಯುತ್ತದೆ‌.ಆದರೆ ಇತ್ತೀಚಿನ ದಿನಗಳಲ್ಲಿ ಹೊರ ಪ್ರಪಂಚರ ದಾಸರಾಗಿ ಕೆಲವರ ಪ್ರಭಾವಕ್ಕೆ ಒಳಗಾಗಿ ಶಿಕ್ಚಣ ಹಂತವನ್ನು ಮುಂದುವರೆಸದೆ ದಾರಿ ತಪ್ಪುತ್ತಿರುವುದು ಬೇಸರ ತಂದಿದೆ‌. ಅದರ ಪ್ರಭಾವದಿಂದ ಶಿಕ್ಷಣ ಪ್ರಭಾವ ನಾಶವಾಗುತ್ತಿದೆ. ಯುವ ಜನಾಂಗಕೆಟ್ಟ ದಾರಿಗೆ ತಲುಪುತ್ತಿರುವುದು ದುರಂತ.ಈ ಬಗ್ಗೆ ಎಚ್ಚೆತ್ತುಕೊಂಡು ನಮ್ನ ಕ್ಷೇತ್ರವನ್ನು ನಾವು ಹುಡುಕಬೇಕಾಗಿದೆ...ದುಷ್ಟ ಚಟಗಳಿಗೆ ಒಳಗಾಗದೇ ಪ್ರಜ್ಞಾವಂತ ಪ್ರಜೆಯಾಗಬೇಕು ಎಂದರು.

ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ‌.ಶಶಿಧರ್ ಮಾತನಾಡಿ, ಈ ವಿದ್ಯಾಸಂಸ್ಥೆ ರಾಜಕೀಯ ಮುಕ್ತವಾಗಿರಬೇಕು.ಹಾಗಾಗಿ ವಿದ್ಯಾರ್ಥಿ ಸಂಘಟನೆ ಎಂದು ಗುರುತಿಸಿಕೊಂಡಿರುವ ಎಬಿವಿಪಿ ಅಂತಹ ವಿದ್ಯಾರ್ಥಿ ಸಂಘಟನೆಗಳಲ್ಲಿ ವಿದ್ಯಾರ್ಥಿಗಳ ಹೋಗದಂತೆ ಹಾಗೂ ಸಂಘಟನೆಯ ಬಾವುಟ ಹಿಡಿದು ಪ್ರತಿಭಟನೆ ಮಾಡದಂತೆ ಸಂಸ್ಥೆಯ ಮುಖ್ಯಸ್ಥರು ನಿಗಾ ವಹಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪುಟ್ಟರಾಜು ವಹಿಸಿದ್ದರು. ಇದೇ ವೇಳೆ ಪಠ್ಯೇತರ ಚಟುವಟಿಕೆಗಳ ಸಮಿತಿಗೆ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಉಪನ್ಯಾಸಕ ಸಿದ್ದರಾಮೇ ಗೌಡ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೃಷ್ಣ, ಐಕ್ಯೂಎಸಿ ಸಂಚಾಲಕರಾದ ಮಧುಶ್ರೀ,ಸಹ ಸಂಚಾಲಕರಾದ ಕೆ.ಪಿ.ಕುಸುಮ, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಸ್.ಸುನಿಲ್ ಕುಮಾರ್, ಎನ್.ಎಸ್.ಎಸ್.ಅಧಿಕಾರಿ ಬಿ.ಕೆ.ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಪಿ.ಜಯಂತಿ,ವಾರ್ಷಿಕ ಸಂಚಿಕೆ ಸಂಚಾಲಕರಾದ ರಶ್ಮಿ,ಆಯಿಶಾ ಸಿದ್ದಿಖಿ, ನಮಿತ, ಸೂರ್ಯಕುಮಾರ್, ಮನೋಜ್ ಕುಮಾರ್, ಮಹಾದೇವ, ರಾಜೇಶ್, ಗಿರೀಶ್, ಸಚ್ಚಿನ್, ಅಧೀಕ್ಷಕ ಮೋಹನ್ ಕುಮಾರ್ ಸೇರಿದಂತೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.