ಕಂಡಕರೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ:ಪರಸ್ಪರ ಪ್ರೀತಿಯಿಂದ ಜೀವನ ನಡೆಸಲು ಸುಫಿಯಾನ್ ಸಹದಿ ಕರೆ

May 28, 2026 - 09:26
May 28, 2026 - 17:43
 0  632
ಕಂಡಕರೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ:ಪರಸ್ಪರ ಪ್ರೀತಿಯಿಂದ ಜೀವನ ನಡೆಸಲು ಸುಫಿಯಾನ್ ಸಹದಿ ಕರೆ

ಚೆಟ್ಟಳ್ಳಿ:ಮುಸ್ಲಿಮರ ಪವಿತ್ರ ಹಬ್ಬವಾದ ತ್ಯಾಗ ಮತ್ತು ಬಲಿದಾನದ ಸಂಕೇತವಾದ "ಬಕ್ರೀದ್" ಹಬ್ಬವನ್ನು ಕಂಡಕರೆಯಲ್ಲಿ ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಎಂಟು ಗಂಟೆಗೆ ಈದ್ ನಮಾಜ್ ಗೆ ಮಹಲ್ ಖತೀಬರಾದ ಸುಫಿಯಾನ್ ಸಹದಿ ಅವರು,ನೇತೃತ್ವ ವಹಿಸಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು,ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನವನ್ನು ಸೂಚಿಸುತ್ತದೆ.ಪ್ರಸ್ತುತ ದಿನಗಳಲ್ಲಿ ಮನುಷ್ಯರಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪರಸ್ಪರ ಪ್ರೀತಿ,ವಿಶ್ವಾಸದಿಂದ ಮಾತ್ರ ಸುಂದರವಾರದ ಶಾಂತಿಯುತ ಸಮಾಜವನ್ನು ಕಟ್ಟಲು ಸಾಧ್ಯ.

ಆದ್ದರಿಂದ ಎಲ್ಲರೂ,ದ್ವೇಷ,ಅಸೂಯೆ ಮರೆತು ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಪರಸ್ಪರ ಒಗ್ಗೂಡಿ ಜೀವನ ನಡೆಸಲು ಸುಫಿಯಾನ್ ಸಹದಿ ಕರೆ ನೀಡಿದರು. ಈದ್ ನಮಾಜ್ ಬಳಿಕ ಪರಸ್ಪರ ಬಕ್ರೀದ್ ಶುಭಾಯಶಯ ಕೋರಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸೈಫುದ್ದೀನ್ ಸಖಾಫಿ,ಮಹಲ್ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಹಾಜಿ,ಪ್ರಧಾನ‌ ಕಾರ್ಯದರ್ಶಿ ಪಿ.ಎಂ ಅಲಿ,ಉಪಾಧ್ಯಕ್ಷ ಪಿ.ಎಚ್ ಗಫೂರ್,ಸಹ ಕಾರ್ಯದರ್ಶಿ ಮನ್ಸೂರ್,ಖಜಾಂಜಿ ಹಾರಿಸ್,ಸ್ವಲಾತ್ ಕಮಿಟಿ ಅಧ್ಯಕ್ಷ ಪಿ.ಎ ಹುಸೇನ್ ಮತ್ತಿತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0