ಕೊಟ್ಟಮುಡಿಯಲ್ಲಿ ಫ್ರೆಶ್ ಇಂಡಿಯಾ ಸ್ವಚ್ಚತಾ ಆಂದೋಲನ
admincoorgdaily
ಕಡಂಗ: ಕೆ.ಎಂ.ಜೆ, ಎಸ್.ವೈ.ಎಸ್, ಎಸ್.ಎಸ್.ಎಫ್ ಕೊಟ್ಟಮುಡಿ ಶಾಖಾ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ FRESH INDIA ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಪೋಕ್ಲು -ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಾಗೂ ಕೊಟ್ಟಮುಡಿ ಮರ್ಕಝ್ ನಿಂದ ಜಂಕ್ಷನ್ ವರೆಗೆ ಎರಡು ಬದಿಗಳಲ್ಲಿ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸ್ವಚ್ಚತಾ ಕ್ರಮದಲ್ಲಿ ಎಸ್.ವೈ ಎಸ್ ಕೊಟ್ಟಮುಡಿ ಶಾಖಾ ಅಧ್ಯಕ್ಷ ಹುಸೈನ್ ಝುಹ್ರಿ, ಉಪಾಧ್ಯಕ್ಷ ಮೈಸಿ ಕತ್ತಣಿರ,ಕಾರ್ಯದರ್ಶಿ ರಫೀಕ್ ಅಝ್ಹರಿ,ಕೊಡಗು ಜಿಲ್ಲಾ ಇಸಾಬ ಕಾರ್ಯ ದರ್ಶಿ ಬಷೀರ್,ಮಡಿಕೇರಿ ಡಿವಿಷನ್ ಇಸಾಬ ಕಾರ್ಯದರ್ಶಿ ಅಶ್ಕರ್ ಸಖಾಫಿ, ಕೆ ಎಂ ಜೆ ಉಪಾಧ್ಯಕ್ಷ ಶಾದುಲಿ ಹಾಜಿ,RM ಹಸೈನಾರ್ ಸದಸ್ಯರುಗಳಾದ ಖಲೀಲ್ ಹಿಮಮಿ,ಹಮೀದ್ ಮಮ್ಮು,ಮೂಸಾನ್,ಅಬೂಬಕರ್ .ಹಂಸ ಬೀಟಿಬಾಣೆ,ಬಸೀಪ,ಝಕರಿಯ್ಯ, ಹಮೀದ್,ಬಷೀರ್,ಹಸೈನಾರ್, ಹಸೈನಾರ್ ಸಿ ಎ .ಆಬಿದ್ ಮತ್ತು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ನೌಫಲ್