ಕುಶಾಲನಗರದಲ್ಲಿ ಜೂನ್ 30ರಂದು ಬೃಹತ್ ಪ್ರತಿಭಟನೆಗೆ ಹಿಂದೂ ಮಲಯಾಳಿ ಸಮಾಜ ಬೆಂಬಲ
admincoorgdaily

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಹಿಂದೂ ಮಲಯಾಳಿ ಸಮಾಜ ಒತ್ತಾಯಿಸಿದೆ.
ಕುಶಾಲನಗರದ ಮಹಿಳೆ ಮತ್ತು ಅಪ್ರಾಪ್ತ ಬಾಲಕನನ್ನು ಕೇರಳಕ್ಕೆ ಕರೆದೊಯ್ದು ಮತಾಂತರ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಬಾಲಕ ಅಪ್ರಾಪ್ತನಾದ್ದರಿಂದ ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಅಧ್ಯಕ್ಷ ವಿ.ಎಂ.ವಿಜಯ್ ಆಗ್ರಹಿಸಿದರು.
ಇಂತಹ ಪ್ರಕರಣಗಳ ಜಾಲ ಪತ್ತೆಗೆ ಎನ್‌ಐಎ ತನಿಖೆ ಅಗತ್ಯ ಎಂದರು. ಸೋಮವಾರಪೇಟೆ ವಿದ್ಯಾರ್ಥಿ ನಾಪತ್ತೆ ಪ್ರಕರಣವೂ ಸೇರಿ ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ, ಜೂ.30ರ ಜನಾಂದೋಲನಕ್ಕೆ ಬೆಂಬಲ ಸೂಚಿಸಿದರು. ಸುನಿಲ್ ಕುಮಾರ್, ಅಜೀಶ್, ವಾಸುದೇವ್, ಸುಧೀರ್‌ಇದ್ದರು.