ಇತಿಹಾಸ ಪ್ರಸಿದ್ಧ ವಿರಾಜಪೇಟೆಯ ಗೌರಿ- ಗಣೇಶೋತ್ಸ: ಅನ್ನ ಸಂತರ್ಪಣೆಗೆ ಪ್ರಾಮುಖ್ಯತೆ ನೀಡುತ್ತಿರುವ ಉತ್ಸವ ಸಮಿತಿಗಳು
ವಿರಾಜಪೇಟೆ: ಆಚರಣೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದ ಉತ್ಸವ ಸಮಿತಿಗಳು ಧಾರ್ಮಿಕ ಆಚರಣೆ ವಿಧಿ ವಿಧಾನಗಳೊಂದಿಗೆ ಮಾಹಪ್ರಸಾದ ಅನ್ನಸಂತರ್ಪಣೆ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿರಾಜಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವ ವಿಸರ್ಜನೆ ಉತ್ಸವವು ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ನಗರದ ಉತ್ಸವ ಸಮಿತಿಗಳು ಸಾಮೂಹಿಕ ಉತ್ಸವ ಮೂರ್ತಿಗಳನ್ನು ನವದಿನಗಳು ಪೂಜಾ ಕಾರ್ಯ ನೆರವೇರಿಸಿ ಅನಂತಪದ್ಮನಾಭ ವೃತದ ಆರಂಭದ ದಿನ ವಿಸರ್ಜನೆ ಮಾಡುವ ಮೂಲಕ ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಹೆಸರುವಾಸಿಯಾಗಿದೆ.
ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ದಖ್ಖನಿ ಮೊಹಲ್ಲಾ ವಿರಾಜಪೇಟೆ ಇವರು ಪ್ರಥಮ ಬಾರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 25 ವರ್ಷಗಳಿಂದ ಉತ್ಸವದ 08 ನೇ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ಸಮಿತಿಯು 15 ವರ್ಷಗಳಿಂದ ಉತ್ಸವದ ಕೊನೆ ದಿವಸ ಮದ್ಯಾಹ್ನ ಅನ್ನ ಸಂತರ್ಪಣೆ ನಡೆಸಿಕೊಂಡು ಬಂದಿದ್ದಾರೆ. ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ತೆಲುಗರ ಬೀದಿ. ಸಮಿತಿಯು ಕೊನೆ ದಿವಸದ ಕೊನೆಯ ಮಾಹಪೂಜೆಯ ಬಳಿಕ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡು ಜನಾನುರಾಗಿದ್ದಾರೆ. ಶ್ರೀ ಬಾಲ ಅಂಜೇನೇಯ ಗಣಪತಿ ಉತ್ಸವ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ. ಇವರುಗಳು ಭಿನ್ನವಾಗಿ ಉತ್ಸವದ ನವ ದಿನಗಳಲ್ಲಿ ಸಂಜೆ ಮಾಹಾ ಪೂಜೆಯ ಬಳಿಕ ಅನ್ನಸಂತರ್ಪಣೆ ವನ್ನು ಸುಮಾರು 05 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಉಳಿದ ಕೆಲವು ಸಮಿತಿಗಳು ನವದಿನಗಳಲ್ಲಿ ಆಚರಣೆಯ ಅನುಗುಣವಾಗಿ ಅನ್ನಸಂತರ್ಪಣೆ ಮಾಡುವ ಮೂಲಕ ಸಾರ್ವಜನಿಕ ಭಕ್ತರಿಗೆ ಉಣಬಡಿಸಿ ಗಣೇಶೋತ್ಸವ ಕ್ಕೆ ಮೆರೆಗು ನೀಡುತ್ತಾ ಬಂದಿರುವುದು. ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ ವಿರಾಜಪೇಟೆ