ರಾಜ್ಯದಲ್ಲಿ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಸಕಾಲಕ್ಕೆ 8.73 ಲಕ್ಷ ಮೆಟ್ರಿಕ್ ಟನ್'ಗಳಷ್ಟು ಯೂರಿಯಾವನ್ನು ಸಮರ್ಪಕವಾಗಿ ಸರಬರಾಜು ಮಾಡಿದೆ: ಸಂಸದ ಯದುವೀರ್ ಒಡೆಯರ್
ಮೈಸೂರು:ರಾಜ್ಯದಲ್ಲಿ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಸಕಾಲಕ್ಕೆ 8.73 ಲಕ್ಷ ಮೆಟ್ರಿಕ್ ಟನ್'ಗಳಷ್ಟು ಯೂರಿಯಾವನ್ನು ಸಮರ್ಪಕವಾಗಿ ಸರಬರಾಜು ಮಾಡಿದೆ. ರಾಜ್ಯದ ಕೃಷಿ ಸಚಿವರು ಬೇಡಿಕೆ ಖಾರೀಫ್ ಋತುವಿಗೆ ಬೇಡಿಕೆ ಇಟ್ಟಿದ್ದ 6.30 ಲಕ್ಷ ಮೆಟ್ರಿಕ್ ಟನ್'ಗೀಂತಲೂ ಹೆಚ್ಚು ಯೂರಿಯಾವನ್ನು ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸಲಾಗಿದೆ. ಇದೆಲ್ಲವೂ ಕಣ್ಮುಂದೆನೆ ಸಾಕ್ಷಿಯಾಗಿರುವಾಗ ಕರ್ನಾಟಕ ಮುಖ್ಯಮಂತ್ರಿಗಳು ಎಂದಿನಂತೆ ಕೇಂದ್ರ ಸರ್ಕಾರದ ಮೇಲೆ ದೂರುವ ಕಾಯಕದಲ್ಲಿ ಮುಂದಾಗಿದ್ದಾರೆ ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಯದುವೀರ್ ಒಡೆಯರ್,ರಾಜ್ಯದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆ ಇಲ್ಲ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯದ ಕೃಷಿ ಸಚಿವರೇ ಹೇಳಿರುವಾಗ ಕೇಂದ್ರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿˌ ತಮ್ಮ ರಾಜಕೀಯದ ಬಣ ಬಡಿದಾಟˌ ಸಿಎಂ ಕುರ್ಚಿ ಗಲಾಟೆ ಹಾಗೂ ದುರಾಡಳಿತವನ್ನು ಮರೆಮಾಚಿ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಮುಖ್ಯಮಂತ್ರಿಗಳ ಮತ್ತೊಂದು 'ಸಾಧನೆ'ಯಾಗಿದೆ ಎಂದು ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.