ತೊಂಬತ್ತುಮನೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಡಿಕೇರಿ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ತ್ರಿನೇತ್ರ ಯುವಕ ಸಂಘ. ಹಾಗೂ ಚೈತನ್ಯ ಸ್ವ- ಸಹಾಯ ಸಂಘ ಇವರ ಸಂಯುಕ್ತ ಅಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದಿ ಸಮಿತಿ ಅಧ್ಯಕ್ಷರಾದರುಮೀನ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತ್ರಿನೇತ್ರ ಯುವಕ ಸಂಘ ಸ್ಥಾಪಕಾಧ್ಯಕ್ಷ ಹಾಗೂ ಚೈತನ್ಯಸ್ವ- ಸಹಾಯ ಸಂಘದ ಅಧ್ಯಕ್ಷ ಪಿ. ಈ ದಿವಾಕರ್. ತ್ರಿನೇತ್ರ ಯುವಕ ಸಂಘ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಪಿ. ಪಿ ಸುಕುಮಾರ್, ತ್ರಿನೇತ್ರ ಯುವಕ ಹಾಗೂ. ಚೈತನ್ಯ ಸ್ವ- ಸಹಾಯ ಸಂಘದ ಕಾರ್ಯದರ್ಶಿ ಎಂ. ಎಂ ಅಬೂಬಕರ್.ಶಾಲಾ ಮುಖ್ಯೋಪಾಧ್ಯಯರಾದ ಚಂದ್ರಿಕಾ ತ್ರಿನೇತ್ರ, ಯುವಕ ಸಂಘದ ಉಪಾಧ್ಯಕ್ಷರಾದ ಜಲೀಲ್ ಕೆ ವೈ. ಶಿಕ್ಷಕರಾದ ಭವಾನಿ, ಸರಿತಾ,ಸದಸ್ಯ ಸುನಿಲ್ ಸಿ. ವಿ ದೇವರಾಜು ವಿದ್ಯಾರ್ಥಿಗಳು ಹಾಜರಿದ್ದರು.